ಕ್ಯಾನ್ಬೆರಾ, ಡಿಸೆಂಬರ್,2,2020(www.justkannada.in): ಆಸ್ಟ್ರೇಲಿಯಾ ವಿರುದ್ಧದ ಮೂರು ಏಕದಿನ ಪಂದ್ಯಗಳಲ್ಲಿ ಈಗಾಗಲೇ ಎರಡು ಪಂದ್ಯ ಸೋತು ಸರಣಿ ಕೈಚೆಲ್ಲಿರುವ ಟೀಂ ಇಂಡಿಯಾ ಇಂದು ನಡೆಯುತ್ತಿರುವ ಕೊನೆಯ ಏಕದಿನ ಪಂದ್ಯದಲ್ಲಿ ಗೆದ್ಧು ವೈಟ್ವಾಷ್ ತಪ್ಪಿಸಿಕೊಳ್ಳಬೇಕಿದೆ.
ಈಗಾಗಲೇ ಮೂರನೇ ಏಕದಿನ ಪಂದ್ಯ ಆರಂಭವಾಗಿದ್ದು ಟಾಸ್ ಗೆದ್ದ ಕೊಹ್ಲಿ ಪಡೆ ಬ್ಯಾಟಿಂಗ್ ಆಯ್ದುಕೊಂಡಿದ್ದು ಆರಂಭಿಕ ಹಿನ್ನೆಡೆ ಅನುಭವಿಸಿದೆ. ಸದ್ಯದ ಮಾಹಿತಿ ಪ್ರಕಾರ ಟೀಂ ಇಂಡಿಯಾ 10.3 ಓವರ್ ನಲ್ಲಿ 51 ರನ್ ಗೆ ಒಂದು ವಿಕೆಟ್ ಕಳೆದುಕೊಂಡಿದೆ. ಆರಂಭಿಕರಾಗಿ ಆಗಮಿಸಿದ್ಧ ಶಿಖರ್ ಧವನ್ ಕೇವಲ 16 ರನ್ ಗಳಿಸಿ ಸೀನ್ ಅಬಾಟ್ ಬೌಲಿಂಗ್ ನಲ್ಲಿ ಅಗರ್ ಗೆ ಕ್ಯಾಚ್ ನೀಡಿ ನಿರ್ಗಮಿಸಿದ್ಧಾರೆ. ಸದ್ಯ ಕ್ಯಾಪ್ಟನ್ ವಿರಾಟ್ ಕೊಹ್ಲಿ 14 ರನ್ ಗಳಿಸಿ ಮತ್ತು ಶುಬ್ಮನ್ ಗಿಲ್ 25 ರನ್ ಗಳಿಸಿ ಸ್ಕ್ರೀಜ್ ನಲ್ಲಿದ್ದಾರೆ.
ಇನ್ನು ಟೀ ಇಂಡಿಯಾ ಈ ಪಂದ್ಯಕ್ಕೆ ತಂಡದಲ್ಲಿ ನಾಲ್ಕು ಪ್ರಮುಖ ಬದಲಾವಣೆ ಮಾಡಿಕೊಂಡಿದೆ. ಹಿಂದಿನ ಪಂದ್ಯಗಳಲ್ಲಿ ತಂಡದಲ್ಲಿದ್ದ ಮಯಾಂಕ್ ಅಗರ್ವಾಲ್, ನವದೀಪ್ ಸೈನಿ, ಮೊಹಮ್ಮದ್ ಶಮಿ, ಯುಜುವೇಂದ್ರ ಚಾಹಲ್ ಅವರ ಬದಲಿಗೆ ಟಿ. ನಟರಾಜನ್, ಶುಬ್ಮನ್ ಗಿಲ್, ಶಾರ್ದೂಲ್ ಠಾಕೂರ್ ಮತ್ತು ಕುಲದೀಪ್ ಯಾದವ್ ಅವರನ್ನು ಕಣಕ್ಕೆ ಇಳಿಸಿದೆ. ಆಸ್ಟ್ರೇಲಿಯಾ ತಂಡದಲ್ಲೂ ಮೂರು ಪ್ರಮುಖ ಬದಲಾವಣೆಯಾಗಿದ್ದು, ಗಾಯಾಗೊಂಡಿರುವ ಡೇವಿಡ್ ವಾರ್ನರ್, ಪ್ಯಾಟ್ ಕುಮ್ಮಿನ್ಸ್, ಮಿಷೆಲ್ ಸ್ಟಾರ್ಕ್ ಬದಲು ಕೆಮರೂನ್ ಗ್ರೀನ್, ಸೀನ್ ಅಬೋಟ್, ಆಷ್ಟನ್ ಅಗರ್ ಸ್ಥಾನದಲ್ಲಿ ಕಣಕ್ಕೆ ಇಳಿದಿದ್ದಾರೆ.
ಆಸ್ಟ್ರೇಲಿಯಾ ತಂಡ: ಅರೋನ್ ಫಿಂಚ್ (ಕಪ್ತಾನ), ಮಾರ್ನಸ್ ಲಬುಸ್ಚೇಂಜ್, ಸ್ಟೀವನ್ ಸ್ಮಿತ್, ಗ್ಲೆನ್ ಮ್ಯಾಕ್ಸ್ವೆಲ್, ಮೋಯ್ಸೆಸ್ ಹೆನ್ರಿಕ್, ಅಲೆಕ್ಸ್ ಕ್ಯಾರಿ(ವಿಕೆಟ್ ಕೀಪರ್), ಕೆಮರೂನ್ ಗ್ರೀನ್, ಆಸ್ಟನ್ ಅಗರ್, ಸೀನ್ ಅಬೋಟ್, ಆಡಂ ಝಂಪಾ, ಜೋಶ್ ಹಝ್ಲೇವುಡ್.
ಭಾರತೀಯ ತಂಡ: ವಿರಾಟ್ ಕೊಹ್ಲಿ (ಕಪ್ತಾನ), ಶಿಖರ್ ಧವನ್, ಶುಬ್ಮನ್ ಗಿಲ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಜಸ್ಪ್ರೀತ್ ಬೂಮ್ರಾ, ಟಿ.ನಟರಾಜನ್.
Key words: 3rd ODI –match- Team India -won – toss – elected -bat.