ಮೈಸೂರು, ಮಾ.26, 2020 : (www.justkannada.in news) ಜಿಲ್ಲೆಯಲ್ಲಿ 35 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರಲ್ಲಿ ಕೋವಿಡ್ ಕಾಯಿಲೆ ದೃಢಪಟ್ಟಿದ್ದು, ಇವರು ಯಾವುದೇ ವಿದೇಶ ಪ್ರವಾಸದ ಹಿನ್ನೆಲೆ ಹೊಂದಿಲ್ಲ. ಆದರು ಕೊರೋನಾ ದೃಢಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ತಿಳಿಸಿರುವುದಿಷ್ಟು…
ನಂಜನಗೂಡಿನಲ್ಲಿ ಔಷಧ ಉತ್ಪಾದನಾ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ವ್ಯಕ್ತಿ, ಈತನಕ ಯಾವುದೇ ಸೋಂಕಿತರ ಸಂಪರ್ಕಕ್ಕೆ ಬಂದಿರಲಿಲ್ಲ. ಇವರ ನೇರ ಸಂಪರ್ಕಕ್ಕೆ ಬಂದ 8 ಜನರನ್ನು ‘ ಸ್ವ ಗೃಹ ನಿರ್ಬಂಧ’ ( ಹೋಂಕ್ವಾರೆಂಟೇನ್ ) ಮಾಡಲಾಗಿದೆ.
ಇದುವರೆಗೂ ವಿದೇಶ ಪ್ರವಾಸದಿಂದ ಬಂದವರಲ್ಲಿ ಮಾತ್ರವೇ ಕೋವಿಡ್ ಕಾಯಿಲೆ ಕಂಡು ಬಂದಿತ್ತು. ಆದರೆ, ಈಗ ಯಾವುದೇ ಪ್ರಯಾಣ ನಡೆಸದವರಲ್ಲಿಯೂ ಕಂಡು ಬಂದಿರುವುದು ಆತಂಕಕ್ಕೆ ಕಾರಣವಾಗಿದೆ.
KEY WORDS : 3rd positive for mysore
ENGLISH SUMMARY :
P52 is 3rd positive for mysore
35 year old male, resident of Mysuru. As per present history the case has no travel history and contact history, however, he was with quality assurance section of a pharmaceutical company ,Nanjangud
and has been in contact with many health care professionals. The case is isolated at designated hospital in Mysuru. The detailed investigation is under process. 7 Primary contacts have been traced
and are under house quarantine.