ಸಿಡ್ನಿ, ಜನವರಿ 10, 2020 (www.justkannada.in): ಭಾರತ ಹಾಗೂ ಆಸ್ಟ್ರೇಲಿಯಾ 3ನೇ ಟೆಸ್ಟ್ ನ ಕೊನೆಯ ದಿನ ಟೀಂ ಇಂಡಿಯಾ ಗೆಲುವಿಗೆ 309 ರನ್‌ಗಳ ಅವಶ್ಯಕತೆ ಇದೆ.
ಆಸ್ಟ್ರೇಲಿಯಾ ನೀಡಿದ 407 ರನ್‌ಗಳ ಬೃಹತ್ ಗುರಿಯನ್ನು ಟೀಮ್ ಇಂಡಿಯಾ ಬೆನ್ನತ್ತಲು ಆರಂಬಿಸಿದ್ದು ಎರಡು ವಿಕೆಟ್‌ಗಳನ್ನು ಕಳೆದುಕೊಂಡಿದೆ.
ಎರಡನೇ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ಲಾಬುಶೇನ್, ಸ್ಮಿತ್ ಹಾಗೂ ಕ್ಯಾಮರೂನ್ ಗ್ರೀನ್ ಸಿಡಿಸಿದ ಭರ್ಜರಿ ಅರ್ಧ ಶತಕಗಳ ನೆರವಿನಿಂದ 312 ರನ್ ಗಳಿಸಿತು.
ಈ ವೇಳೆ ಆಸಿಸ್ ಡಿಕ್ಲೇರ್ ಮಾಡಿಕೊಂಡಿದ್ದು ಭಾರತಕ್ಕೆ 407 ರನ್‌ಗಳ ಬೃಹತ್ ಗುರಿಯನ್ನು ನೀಡಿದೆ.
ಶುಬ್ಮನ್ ಗಿಲ್ 31 ರನ್, ರೋಹಿತ್ ಶರ್ಮಾ 52 ರನ್ ಗಳಿಸಿ ಔಟಾಗಿದ್ದಾರೆ. ಸದ್ಯ ಕ್ರೀಸ್‌ನಲ್ಲಿ ನಾಯಕ ಚೇತೇಶ್ವರ್ ಪೂಜಾರ ಹಾಗೂ ಅಜಿಂಕ್ಯ ರಹಾನೆ ಕ್ರೀಸ್‌ನಲ್ಲಿದ್ದಾರೆ.