ಬೆಂಗಳೂರು, ಜನವರಿ 03, 2019 (www.justkannada.in): ನಿರ್ಮಾಪಕಿ ವಂದನಾ ಜೈನ್ ನಟಿ ಸಂಜನಾ ವಿರುದ್ಧ ಮಾನನಷ್ಟ ಮೊಕದಮ್ಮೆ ಹಾಕಿದ್ದಾರೆ.
ಕ್ರಿಸ್ ಮಸ್ ಹಿಂದಿನ ರಾತ್ರಿ ಡಿಸೆಂಬರ್ 24 ರಾತ್ರಿ ನಡೆದ ಘಟನೆ ಬಗ್ಗೆ ವಂದನಾ ಜೈನ್ ತಡವಾಗಿ ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ವಿಡಿಯೋ ಮಾಡಿ ಶೇರ್ ಮಾಡಿರುವ ವಂದನಾ, ನಟಿ ಸಂಜನಾ ಮಾಡಿರುವ ಅರೋಪಗಳೆಲ್ಲವನ್ನು ತಳ್ಳಿಹಾಕಿದ್ದಾರೆ.
ಸಂಜನಾ ಆರೋಪದಿಂದ ಬೇಸರವಾಗಿದೆ ಎಂದು ಹೇಳಿದ್ದಾರೆ. ಜೊತೆಗೆ ಸಂಜನಾ ವಿರುದ್ಧ 4 ಕೋಟಿ ಮಾನನಷ್ಟ ಮೊಕದಮ್ಮೆ ಹಾಕಿದ್ದಾರೆ. ಸ್ಯಾಂಡಲ್ ವುಡ್ ನಟಿ ಸಂಜನಾ ಗಲ್ರಾನಿ ಮತ್ತು ನಿರ್ಮಾಪಕಿ ವಂದನಾ ಜೈನ್ ಗಲಾಟೆ ಪ್ರಕರಣ ಮತ್ತೆ ಸದ್ದು ಮಾಡುತ್ತಿದೆ.