ಬಿಜೆಪಿ ಸರ್ಕಾರದ ಅವಧಿಯ 40% ಕಮಿಷನ್ ಆರೋಪ : ‘SIT’ ರಚನೆಗೆ ನಿರ್ಧಾರ

ಬೆಂಗಳೂರು ,ಏಪ್ರಿಲ್,11,2025 (www.justkannada.in):  ಬಿಜೆಪಿ ಅವಧಿಯ 40% ಕಮಿಷನ್ ಆರೋಪಕ್ಕೆ ಸಂಬಂಧಿಸಿದಂತೆ ನ್ಯಾ. ನಾಗಮೋಹನ್ ದಾಸ್ ಅವರು ಸಲ್ಲಿಸಿದ ವರದಿಯನ್ನು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಅಂಗೀಕರಿಸಿದೆ.

ನ್ಯಾಯಮೂರ್ತಿ ನಾಗ ಮೋಹನ್  ನೇತೃತ್ವದ ಸಮಿತಿ ವರದಿಯನ್ನು ಆಧರಿಸಿ ಎಸ್‌ಐಟಿ ರಚನೆ ಮಾಡಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಂಡಿದೆ ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ 40% ಕಮಿಷನ್ ಪಡೆಯುತ್ತಿದ್ದಾರೆ ಎಂದು ರಾಜ್ಯ ಗುತ್ತಿಗೆದಾರರ ಸಂಘ ಆರೋಪಿಸಿತ್ತು.  ಈ ಸಂಬಂಧ ನ್ಯಾಯಮೂರ್ತಿ ನಾಗ ಮೋಹನ್   ನೇತೃತ್ವದಲ್ಲಿ ಈಗಿನ ಕಾಂಗ್ರೆಸ್ ಸರ್ಕಾರ ಸಮಿತಿ ರಚನೆ ಮಾಡಿತ್ತು.

ಇಂದು ಸಚಿವ ಸಂಪುಟ ಸಭೆಯಲ್ಲಿ ವರದಿ ಅಂಗೀಕರಿಸಲಾಗಿದ್ದು, ವರದಿ ಆಧರಿಸಿ SIT ರಚನೆಗೆ ನಿರ್ಧಾರ ಕೈಗೊಂಡಿದೆ. ಬಿಜೆಪಿ ಅವಧಿಯ 40% ಕಮಿಷನ್ ಆರೋಪದ ಬಗ್ಗೆ  ಪರಿಶೀಲನೆಗೆ ಎಸ್ ಐಟಿ ರಚನೆಗೆ ನಿರ್ಧಾರ ಮಾಡಿದ್ದೇವೆ. ಸಂಪುಟ ಸಭೆಯಲ್ಲಿ 21 ವಿಷಯಗಳ  ಮೇಲೆ ನಿರ್ಣಯ ಕೈಗೊಂಡಿದ್ದೇವೆ ಎಂದು ಕಾನೂನು ಸಚಿವ ಎಚ್.ಕೆ ಪಾಟೀಲ್ ತಿಳಿಸಿದ್ದಾರೆ.

Key words:  BJP government, 40% commission, allegation, SIT