ಬೆಂಗಳೂರು, ಏಪ್ರಿಲ್ 08, 2020 (www.justkannada.in): ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 31.85 ಕೋಟಿ ದೇಣಿಗೆ ನೀಡಿದ್ದು, ಪ್ರಸ್ತುತ ಈ ಕೆಳಕಂಡ ಸಹಕಾರ ಸಂಘಗಳು / ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಂದ ನೀಡಿದ ದೇಣಿಗೆಯು ಸೇರಿದಂತೆ “ಸಹಕಾರ ಇಲಾಖೆ”ಯ ವತಿಯಿಂದ ಇಂದಿಗೆ ಒಟ್ಟಾರೆ ಮೊತ್ತ ರೂ. 40.22 ಕೋಟಿಗಳನ್ನು ದೇಣಿಗೆಯಾಗಿ ಸಲ್ಲಿಸಲಾಗಿದೆ.
ಕೋವಿಡ್-19 ವೈರಾಣುವನ್ನು ತಡೆಗಟ್ಟಲು ಸರ್ಕಾರ ಯುದ್ಧೋಪಾದಿಯಲ್ಲಿ ಕ್ರಮ ಕೈಗೊಳ್ಳಲು ನಾಡಿನ ನಾಗರಿಕರಿಗೆ ವೈದ್ಯೋಪಚಾರಗಳನ್ನು ಮತ್ತು ಪ್ರಯೋಗಾಲಯಗಳು ಹಾಗೂ ಮೆಡಿಕಲ್ ಕಿಟ್‌ಗಳು ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ತಾವು ಮಾನ್ಯ ಎಂಬುದನ್ನು ತಮ್ಮ ಅವಗಾಹನೆಗಾಗಿ ಸಲ್ಲಿಸಲಾಗಿದೆ.
ಇಂದು 8 ಕೋಟಿಗಳನ್ನು ದೇಣಿಗೆಯಾಗಿ ನೀಡಲಾಗಿದೆ. ಈ ಸಂದರ್ಭದಲ್ಲಿ ಕೆಎಂಎಫ್ ಅಧ್ಯಕ್ಷರಾಗಿರುವ ಶ್ರೀ ಬಾಲಚಂದ್ರ ಜಾರಕಿಹೊಳಿ,ಸಚಿವ ರಾದ ಡಾ.ಸುಧಾಕರ್ ಹಾಗೂ ವಿಧಾನಪರಿಷತ್ ಸದಸ್ಯರಾಗಿರುವ ಎಸ್.ರವಿ ಇತರರು ಇದ್ದರು.