ಬೆಂಗಳೂರು,ಸೆಪ್ಟಂಬರ್,10,2022(www.justkannada.in): ರಾಜ್ಯ ಬಿಜೆಪಿ ನಾಯಕರು ದೊಡ್ಡಬಳ್ಳಾಪುರದಲ್ಲಿ ಹಮ್ಮಿಕೊಂಡಿರುವ ಜನಸ್ಪಂದನ ಸಮಾವೇಶದ ಬಗ್ಗೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಟೀಕಿಸಿದ್ದಾರೆ.
ಈ ಕುರಿತು ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ಬಿಜೆಪಿಯವರು ಏನು ಸಾಧನೆ ಮಾಡಿದ್ದಾರೆ ಹೇಳೋಕೆ ಭ್ರಷ್ಟಾಚಾರ ಬಿಟ್ಟರೆ ಬೇರೇನು ಸಾಧನೆ ಇದೆ. ಸರ್ಕಾರದ 40 ಪರ್ಸೆಂಟ್ ಕಮಿಷನ್ ಕುರಿತು ಹೇಳಬೇಕು ಅಷ್ಟೆ. ಸರ್ಕಾರ ಕಷ್ಟಕ್ಕೊಳಗಾದವರಿಗೆ ಸ್ಪಂದಿಸಬೇಕಲ್ವಾ ಜನರ ಕಷ್ಟ ಸುಖ ಕೇಳದೆ ಜನಸ್ಪಂದನ ಕಾರ್ಯಕ್ರಮ ಮಾಡುತ್ತಿದ್ದಾರೆ. ಯಾವ ಸಚಿವರೂ ಜಿಲ್ಲೆಗಳಿಗೆ ಹೋಗಿ ಸಮಸ್ಯೆ ಕೇಳುತ್ತಿಲ್ಲ. ಜನರ ಕಷ್ಟ ಕೇಳದೆ ಜನಸ್ಪಂದನ ಮಾಡುತ್ತಿದ್ದಾರೆ ಎಂದು ಕುಟುಕಿದರು.
ಮಳೆ ಪ್ರವಾಹದಿಂದ ರಾಜ್ಯದ ಜನ ಸಂಕಷ್ಟದಲ್ಲಿದ್ದಾರೆ. ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಿದ್ದೀರಾ ದುಡ್ಡು ಖರ್ಚು ಮಾಡಿಕೊಂಡು ರಾಜಕೀಯ ಮಾಡುತ್ತಿದ್ದಾರೆ. ಜನಸ್ಪಂದನ ಇದು ರಾಜಕೀಯ ಪ್ರೇರಿತ ಕಾರ್ಯಕ್ರಮ. ಬರೀ ಹೆಸರು ಮಾತ್ರ ಜನಸ್ಪಂದನ ಅಂದ್ರೆ ಆಯ್ತಾ. ಬೆಂಗಳೂರಿನಲ್ಲಿ ಜನ ಬೋಟಲ್ಲಿ ಓಡಾಡು ಪರಿಸ್ಥಿತಿ ಇದೆ ಎಂದು ವಾಗ್ದಾಳಿ ನಡೆಸಿದರು.
Key words: 40 percent-commission -government –Janaspandana-BJP -Siddaramaiah.