ಚಿತ್ರದುರ್ಗ,ಅಕ್ಟೋಬರ್,8,2022(www.justkannada.in): ಚಿತ್ರದುರ್ಗದ ಮುರುಘಾ ಮಠದಲ್ಲಿ ಗೋಡೆಗೆ ಹಾಕಲಾಗಿದ್ಧ 47 ಫೋಟೋಗಳು ಕಳ್ಳತನವಾಗಿರುವ ಘಟನೆ ನಡೆದಿದೆ.
ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಲೈಂಗಿಕ ದೌರ್ಜನ್ಯ, ಫೋಕ್ಸೋ ಕಾಯ್ದೆಯಡಿ ಮುರುಘಾ ಮಠದ ಶಿವಮೂರ್ತಿ ಶ್ರೀಗಳು ಬಂಧಿತರಾಗಿದ್ದಾರೆ. ಈ ನಡುವೆ ಮುರುಘಾ ಶ್ರೀಗಳು ರಾಷ್ಟ್ರಪತಿ, ಪ್ರಧಾನಿ ಸೇರಿ ಗಣ್ಯರ ಜೊತೆ ತೆಗೆಸಿಕೊಂಡಿರುವ 47 ಫೋಟೋಗಳನ್ನ ಕಳ್ಳತನ ಮಾಡಲಾಗಿದೆ ಎನ್ನಲಾಗಿದೆ.
ಅಕ್ಟೋಬರ್ 5 ರಂದು ಕಳ್ಳತನವಾಗಿದ್ದು ಕಳ್ಳತನದ ದೃಶ್ಯ ಸಿ.ಸಿ ಟಿವಿಯಲ್ಲಿ ದಾಖಲಾಗಿದೆ. ಈ ಕುರಿತು ಚಿತ್ರದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Key words: 47 photos –stolen- Chitradurga- Muruga Math