ಬೆಂಗಳೂರು,ಫೆ,10,2020(www.justkannada.in): ಕೃಷಿ ಮಹಾಮಂಡಳಿಯಲ್ಲಿ 48 ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಸಿಸಿಬಿ ಪೊಲೀಸರು ಮಧ್ಯವರ್ತಿಗಳನ್ನ ಬಂಧಿಸಿದ್ದಾರೆ.
ಕೃಷಿ ಮಾರಾಟ ಮಹಾಮಂಡಳಿ ಖಜಾಂಚಿ ಲಕ್ಷ್ಮಣ್ ಮತ್ತು ಮಧ್ಯವರ್ತಿ ಸಿರಿಲ್ ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳು ಸಿಂಡಿಕೇಟ್ ಬ್ಯಾಂಕ್ ಮತ್ತು ಕೃಷಿ ಇಲಾಖೆಯ ನಡುವೆ ಮಧ್ಯವರ್ತಿಗಳಾಗಿ ಕಾರ್ಯನಿರ್ವಹಿಸುತ್ತಿದ್ದರು.ಪರ್ಸೆಂಟೇಜ್ ಲೆಕ್ಕದಲ್ಲಿ ವ್ಯವಹಾರ ನಡೆಸುತ್ತಿದ್ದ ಬಂಧಿತರು ಉತ್ತರಹಳ್ಳಿ ಸಿಂಡಿಕೇಟ್ ಬ್ಯಾಂಕ್ ನ ಅಸಿಸ್ಟೆಂಟ್ ಮ್ಯಾನೇಜರ್ ಜಯರಾಮ್ ಅವರೊಂದಿಗೆ ಸೇರಿ ವಂಚನೆ ಮಾಡಿದ್ದರು.
ಆರೋಪಿಗಳು ನಕಲಿ ಬಾಂಡ್ ಗಳನ್ನು ಸೃಷ್ಟಿಸಿ 48 ಕೋಟಿ ರೂಪಾಯಿ ವಂಚಿಸಿದ್ದು, ಈ ಅವ್ಯವಹಾರ ಲೆಕ್ಕಪರಿಶೋಧನೆ ವೇಳೆ ಬಯಲಾಗಿತ್ತು. ಈ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ಕೃಷಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಕರೀಗೌಡ ಅವರು ಕಮರ್ಷಿಯಲ್ ಸ್ಟ್ರೀಟ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ದೂರಿನನ್ವಯ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಿದ್ದರು. ಇದೀಗ ಬೆಂಗಳೂರು ಸಿಸಿಬಿ ಪೊಲೀಸರು ಆರೋಪಿಗಳಿಬ್ಬರನ್ನ ಬಂಧಿಸಿದ್ದಾರೆ.
Key words: 48 crores- fraud case – Agriculture Council-Arrest- Bangalore -CCB Police.