ಡಿ. 29 ರಂದು 4ನೇ ಮೈಸೂರು ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ : ಪೋಸ್ಟರ್ ಬಿಡುಗಡೆ

ಮೈಸೂರು,ಡಿಸೆಂಬರ್,26,2024 (www.justkannada.in): ಡಿಸೆಂಬರ್ 29 ರಂದು 4ನೇ ಮೈಸೂರು ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ 2024 ಆಯೋಜನೆ ಮಾಡಲಾಗಿದ್ದು ಇಂದು ಸ್ಯಾಂಡಲ್ ವುಡ್ ನ ಖ್ಯಾತ ಉದಯೋನ್ಮುಖ ನಟ ಮತ್ತು ರಂಗಭೂಮಿ ಕಲಾವಿದ  ಡಾಲಿ ಧನಂಜಯ್ ಪೋಸ್ಟರ್ ಬಿಡುಗಡೆ ಮಾಡಿದರು.

ಡಿಸೆಂಬರ್ 29 ರಂದು ಮೇಕ್ ಸೊಸೈಟಿ ಸ್ಮೈಲ್ ಫೌಂಡೇಶನ್ ವತಿಯಿಂದ ಮೈಸೂರಿನ ಜೆ.ಕೆ ಮೈದಾನದಲ್ಲಿ ಬೆಳಗ್ಗೆ 9:00 ರಿಂದ ರಾತ್ರಿ 10ರವರೆಗೂ 4ನೇ ಮೈಸೂರು ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ 2024 ಮತ್ತು ಮೊದಲ ಬಾರಿಗೆ ಚಿತ್ರಸಂತೆ ಆಯೋಜಿಸಲಾಗಿದ್ದು, ಇದರ ಪ್ರಚಾರದ ಪೋಸ್ಟರ್ ಅನ್ನುನಟ  ಡಾಲಿ ಧನಂಜಯ್ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಚಿತ್ರ ಸಂತೆ ನಡೆಯುತ್ತಿರುವುದು ಸಂತಸ ವಿಚಾರ ಎಂದು ಹರ್ಷ ವ್ಯಕ್ತಪಡಿಸಿ, ಹೆಚ್ಚಿನ ಕಲಾ ಪ್ರೇಮಿಗಳು ಆಗಮಿಸಿ ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು.

ನಂತರ ಮಾತನಾಡಿದ  ಮೈಸೂರು ಅಂತರಾಷ್ಟ್ರೀಯ ಚಲನಚಿತ್ರ ಉತ್ಸವದ ಆಯೋಜಕ ರಂಜಿತಾ ಸುಬ್ರಮಣ್ಯ, ಕಳೆದ 4 ವರ್ಷದಿಂದ ಸಿನಿಸಂತೆ ಆಯೋಜಿಸುತ್ತಾ ಬಂದಿದ್ದು ಈ ವರ್ಷ ವಿಶೇಷವಾಗಿ ಸಾರ್ವಜನಿಕರಿಗೆ ಗಾಯನ ಸ್ಪರ್ಧೆ, ಮಕ್ಕಳಿಗೆ ಅಲಂಕಾರಿಕ ಹುಡುಗಿ ಸ್ಪರ್ಧೆ ಹಾಗೂ ಚಿತ್ರಕಲಾ ಸ್ಪರ್ಧೆ ಆಯೋಜಲಾಗುತ್ತಿದೆ.  ಪ್ರತಿ ವಿಭಾಗದ ಮೂರು ಸ್ಪರ್ಧೆಯ ವಿಜೇತರಿಗೆ ಆಕರ್ಷಕ ಬಹುಮಾನ ನೀಡಲಾಗುವುದು ಹಾಗೂ ಸಿನಿ ಸಂತೆಯಲ್ಲಿ ವಿವಿಧ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆ ಗಳನ್ನು ತೆರೆಯಲಾಗುವುದು.  ಹೆಚ್ಚಿನ ಮಾಹಿತಿಗಾಗಿ 6360959871/6364632425 ನಂಬರ್ ಗೆ ಸಂಪರ್ಕಿಸಬಹುದು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್, ಸಂಪರ್ಕಾಧಿಕಾರಿ  ಶಂಕರ್ ಎಸ್‌ಎನ್, ಉದ್ಯಮಿ ಗಗನ್ ದೀಪ್, ಸಿನಿ ಸಂತೆ ನಿರ್ದೇಶಕಿ ಮತ್ತು ಸಂಸ್ಥಾಪಕಿ ಸಂಧ್ಯಾ ರಾಣಿ, ಐಶ್ವರ್ಯ ಜಿ ಪ್ರಸಾದ್, ಹರ್ಷ, ರೂಪ ಹಾಗೂ ಇನ್ನಿತರರು ಹಾಜರಿದ್ದರು.

Key words: 4th Mysore International Film Festival, December 29, Poster, released