ಮೈಸೂರು,ಆಗಸ್ಟ್,2,2022(www.justkannada.in): ಮೈಸೂರಿನ ಪ್ರತಿಷ್ಠಿತ ಶೋರೂಂಗಳಲ್ಲಿ ಒಂದಾದ ನಕ್ಷಾ ಹೋಂಡಾ ಶೋರೂಂನ ನಾಲ್ಕನೇ ವರ್ಷದ ವಾರ್ಷಿಕೋತ್ಸವ ಸಮಾರಂಭವನ್ನು ಅತ್ಯಂತ ಅರ್ಥಪೂರ್ಣವಾಗಿ ಆಯೋಜಿಸಲಾಗಿತ್ತು.
ಮೈಸೂರಿನ ಬಂಬೂ ಬಜಾರ್ ನಲ್ಲಿರುವ ನಕ್ಷಾ ಹೋಂಡಾ ಶೋರೂಂನ ಮುಖ್ಯ ಶಾಖೆಯಲ್ಲಿ ನಡೆದ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಡಿಜಿಎಂ ಅನಂತು, ನಕ್ಷಾ ಹೋಂಡಾ ಶೋರೂಂ ಕೇವಲ ನಾಲ್ಕು ವರ್ಷದ ಅವಧಿಯಲ್ಲಿ ನಾಲ್ಕು ಶಾಖೆಗಳನ್ನು ಹೊಂದಿದ್ದು ನನಗೆ ತುಂಬಾ ಸಂತೋಷವನ್ನುಂಟು ಮಾಡಿದೆ. ಶೋರೂಂ ಆರಂಭಿಸಿದ ಕೆಲವೇ ದಿನಗಳ ನಂತರ ಕೊರೊನಾ ಮಹಾಮಾರಿ ವಕ್ಕರಿಸಿತ್ತು. ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿತ್ತು. ಆದರೂ ಧೃತಿಗೆಡದೆ ನಾಲ್ಕು ಶಾಖೆಗಳನ್ನು ಆರಂಭಿಸಿರುವುದು ಮಾಲೀಕ ಮತ್ತು ನೌಕರರ ನಡುವಿನ ಬಾಂಧವ್ಯವನ್ನು ತೋರಿಸುತ್ತದೆ. ಇನ್ನು ವಿಶೇಷವೆಂದರೆ ಕೊರೊನಾ ಮಹಾಮಾರಿಯಲ್ಲೂ ನಕ್ಷಾ ಹೋಂಡಾ ಶೋರೂಂನ ಯಾವುದೇ ನೌಕರರನ್ನು ಕೆಲಸದಿಂದ ತೆಗೆಯಲಿಲ್ಲ. ಅವರ ಸಂಬಳವನ್ನು ಕಡಿತಗೊಳಿಸಲಿಲ್ಲ. ಇದು ನಿಜವಾಗಿಯೂ ಅಪರೂಪದ ವಿಶೇಷವಾದ ಸಾಧನೆ ಎಂದು ಬಣ್ಣಿಸಿದರು.
ಎಂ ಡಿ ಹರೀಶ್ ಕುಮಾರ್ ಹೆಗ್ಡೆ ಅವರ ಸಾಧನೆಯನ್ನು ನೋಡಿ ನನ್ನ ಬ್ಯಾಂಕ್ ನ ವತಿಯಿಂದ ನಕ್ಷಾ ಹೋಂಡಾ ಶೋರೂಂ ಎಲ್ಲಾ ಸಿಬ್ಬಂದಿ ವರ್ಗದವರಿಗೆ ಉಚಿತವಾಗಿ ಉಳಿತಾಯ ಖಾತೆ, ಎಟಿಎಂ ಕಾರ್ಡ್ ಮತ್ತು ಎರಡು ಲಕ್ಷ ರೂಪಾಯಿಗಳ ಪ್ರೀಮಿಯಂ ಹೊಂದಿರುವ ಪಾಲಿಸಿಯನ್ನು ನೀಡಲು ನಾನು ಬದ್ದನಾಗಿರುತ್ತೇನೆ ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಎಂ ಡಿ ಹರೀಶ್ ಕುಮಾರ್ ಹೆಗ್ಡೆ, ಹಿರಿಯ ವಕೀಲರು ಲಾ ಗೈಡ್ ಸಂಪಾದಕರು ಆದ ಹೆಚ್ ಎನ್ ವೆಂಕಟೇಶ್, ಯೂನಿಯನ್ ಬ್ಯಾಂಕ್ ಎಜಿಎಂ ಕಾಂತರಾಜು, ಶ್ರವಣಬೆಳಗೊಳ ಪ್ರವಿತ್ರ ಕ್ಷೇತ್ರದ ವಿಶೇಷಾಧಿಕಾರಿ ರಾಜೇಶ್ ಖನ್ನಾ ನಕ್ಷಾ ಹೋಂಡಾ ಶೋರೂಂನ ನಿರ್ದೇಶಕರಾದ ಅಭಿಷೇಕ್ ಹೆಗ್ಡೆ ಹಾಗೂ ಅಭಿಜಿತ್ ಹೆಗ್ಡೆ ಮತ್ತು ನಕ್ಷಾ ಹೋಂಡಾ ಶೋರೂಂನ ಎಲ್ಲಾ ಸಿಬ್ಬಂದಿ ಹಾಜರಿದ್ದರು.
Key words: 4th Year -Anniversary-Naksha Honda –Showroom-Mysore