ಮೈಸೂರು,ಮಾರ್ಚ್,5,2021(www.justkannada.in): ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣದಲ್ಲಿ 5 ಕೋಟಿ ಡೀಲ್ ನಡೆದಿದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೊಸಬಾಂಬ್ ಸಿಡಿಸಿದ್ದಾರೆ.
ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಮಾತನಾಡಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ರಮೇಶ್ ಜಾರಕಿಹೊಳಿ ಸಿಡಿ 5 ಕೋಟಿಗೆ ಡೀಲ್ ಆಗಿದೆ. ಕಳೆದ ಮೂರು ತಿಂಗಳಿಂದಲೂ ಈ ಸೆಕ್ಸ್ ಸಿಡಿ ಡೀಲ್ ನಡೆದಿದೆ. ದೊಡ್ಡ ದೊಡ್ಡವರೇ ಈ ಸೆಕ್ಸ್ ಸಿಡಿ ಡೀಲ್ ನಲ್ಲಿ ಇದ್ದಾರೆ. ಈ ಪ್ರಕರಣ ತನಿಖೆ ನಡೆಸುವ ಜವಾಬ್ದಾರಿ ಸರ್ಕಾರದ್ದು ಎಂದು ಹೇಳಿದರು.
ಹಾಗೆಯೇ ನಾನು ಈ ಪ್ರಕರಣವನ್ನ ನೋಡಿ ಖುಷಿ ಪಡುವವನಲ್ಲ. ನಾನು ಒಂದು ಕಲ್ಲು ಹೊಡೆಯವಂತಹ ವ್ಯಕ್ತಿಯಲ್ಲ. ಸಿಡಿ ವಿಚಾರದಲ್ಲಿ ಬ್ಲಾಕ್ ಮೇಲ್ ಮಾಡಲಾಗುತ್ತಿದೆ. ಅವರ ಬಳಿ ಇರುವ ಸಿಡಿಗಳನ್ನ ಸರ್ಕಾರವೇ ವಶಕ್ಕೆ ಪಡೆದು ಬಿಡುಗಡೆ ಮಾಡಲಿ ಎಂದು ಹೆಚ್.ಡಿ ಕುಮಾರಸ್ವಾಮಿ ಆಗ್ರಹಿಸಿದರು.
ENGLISH SUMMARY…
Rs.5 crore deal in Ramesh Jarkiholi sex CD case: HDK explodes new bomb
Mysuru, Mar. 05, 2021 (www.justkannada.in): Former Chief Minister H.D. Kumaraswamy has exploded a new bomb by stating that a sum of Rs.5 crore dealing has been made in Minister Ramesh Jarkiholi’s sex CD case.
Speaking over this issue in Mysuru today the former Chief Minister alleged that a sum of Rs. 5 crore dealing has been entered into concerning this case and this dealing was going on for the last three months. “There are many bigwigs involved in this sex CD case. It is the responsibility of the government to investigate this,” he added.
“I am not a person who feels happy by looking at such cases. I won’t throw stones at others. Blackmailing is going on in this CD case. Let the government take over the CDs and release it,” he demanded.
Keywords: Former Chief Minister H. D. Kumaraswamy/ sex CD case/Minister Ramesh Jarkiholi/ Rs. 5 crore dealing
Key words: 5 crore- deal Ramesh jarakiholi- Rasaleele -CD –case-HD Kumaraswamy