ಚಿತ್ರದುರ್ಗ,ಆಗಸ್ಟ್,4,2023(www.justkannada.in): ನಗರದ ಕವಾಡಿಗರಹಟ್ಟಿ ಬಡಾವಣೆಯಲ್ಲಿ ಕಲುಷಿತ ನೀರು ಸೇವಿಸಿ ಮೃತಪಟ್ಟವರ ಸಂಖ್ಯೆ ಇದೀಗ 5ಕ್ಕೆ ಏರಿಕೆಯಾಗಿದೆ.
ಚಿತ್ರದುರ್ಗದಲ್ಲಿ ಕಲುಷಿತ ನೀರು ಸೇವಿಸಿದ್ದ ಪ್ರಕರಣಕ್ಕೆ ಸಂಬಂದಪಟ್ಟಂತೆ ಮತ್ತೋರ್ವ ಮಹಿಳೆ ಸಾವನ್ನಪ್ಪಿದ್ದು, ಈ ಮೂಲಕ ಮೃತಪಟ್ಟವರ ಸಂಖ್ಯೆ ಐದಕ್ಕೆ ಎರಿದೆ. ಇಂದು ಪಾರ್ವತಮ್ಮ ಎಂಬುವವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
2 ವರ್ಷದ ಹಿಂದೆ ಪಾಶ್ವವಾಯುಗೆ ತುತ್ತಾಗಿದ್ದ ಪಾರ್ವತಮ್ಮಗೆ ಕಳೆದ ಎರಡು ದಿನದಿಂದ ವಾಂತಿ ಬೇದಿ ಕಾಣಿಸಿಕೊಂಡಿತ್ತು. ಇದೀಗ ಚಿಕಿತ್ಸೆ ಫಲಿಸದೇ ಪಾರ್ವತಮ್ಮ ಮೃತಪಟ್ಟಿದ್ದು ಪಾರ್ವತಮ್ಮ ಕುಟುಂಬಕ್ಕೆ ಚಿಕಿತ್ಸೆ ಮುಂದುವರೆದಿದೆ.
ಈಗಾಗಲೇ ಕಲುಷಿತ ನೀರು ಸೇವನೆಯಿಂದ ಆಸ್ಪತ್ರೆಯಲ್ಲಿ ದಾಖಲಾಗಿರುವ ಹಲವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ನಿನ್ನೆ ಲ್ಯಾಬ್ ವರದಿಯ ಪ್ರಕಾರ ನೀರಿನಲ್ಲಿ ಯಾವುದೇ ವಿಷಕಾರಿ ಅಂಶ ಇಲ್ಲ ಕಾಲರಾ ರೋಗದ ಮಾದರಿ ಪತ್ತೆಯಾಗಿದೆ ಎಂದು ವರದಿಯಲ್ಲಿ ಹೇಳಲಾಗಿತ್ತು
ನಗರಸಭೆ ಎಇಇ, ಜೆಇ, ವಾಲ್ವ್ಮ್ಯಾನ್ ಸಸ್ಪೆಂಡ್.
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ ನಗರಸಭೆಯ ಎಇಇ ಮಂಜುನಾಥ್ ರೆಡ್ಡಿ, ಜೆಇ ಕಿರಣ್, ವಾಲ್ವ್ಮ್ಯಾನ್ ಪ್ರಕಾಶಬಾಬು ಸೇರಿದಂತೆ ಗುತ್ತಿಗೆ ಆಧಾರಿತ ನೌಕರ ನೀರಗಂಟಿ ಸುರೇಶ್ ಎಂಬುವವರನ್ನು ಕೆಲಸದಿಂದ ಅಮಾನತುಗೊಳಿಸಿ ಚಿತ್ರದುರ್ಗ ಜಿಲ್ಲಾಧಿಕಾರಿ ದಿವ್ಯಪ್ರಭು ಆದೇಶ ಹೊರಡಿಸಿದ್ದಾರೆ.
Key words: 5 Death – contaminated -water –chitradurga