ಬೆಂಗಳೂರು,ಅಕ್ಟೋಬರ್,8,2021(www.justkannada.in): ಕೋವಿಡ್ ಗೆ ಬಲಿಯಾದ ಮೂವರು ಪತ್ರಕರ್ತರ ಕುಟುಂಬಕ್ಕೆ ರಾಜ್ಯ ಸರ್ಕಾರ ತಲಾ 5 ಲಕ್ಷ ಪರಿಹಾರ ಬಿಡುಗಡೆ ಮಾಡಿದೆ.
ಚನ್ನರಾಯಪಟ್ಟಣ ತಾಲ್ಲೂಕು ಕಾರ್ಯ ನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಸ್ವಾಮಿಗೌಡ, ಹಾವೇರಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿಗಾರ ಗಂಗಾಧರ ಹೂಗಾರ ಮತ್ತು ಬೀದರ್ ಪೋಟೋ ಜರ್ನಲಿಸ್ಟ್ ಮಾರುತಿ ರಾವ್ ತಂದಾಳೆ ಅವರ ಕುಟುಂಬಕ್ಕೆ ಪರಿಹಾರ ನೀಡುವಂತೆ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮಾಡಿದ ಮನವಿ ಮೇರೆಗೆ, ಅಂದು ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರು ತಲಾ 5 ಲಕ್ಷ ರೂ ಮಂಜೂರು ಮಾಡಿದ್ದರು.
ಪತ್ರಕರ್ತರುಗಳಾದ ಸ್ವಾಮಿಗೌಡ, ಮಾರುತಿ ರಾವ್ ತಂದಾಳೆ, ಗಂಗಾಧರ ಹೂಗಾರ ಅವರ ಕುಟುಂಬಕ್ಕೆ ತಲಾ 5 ಲಕ್ಷ ರೂಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಿಡುಗಡೆ ಮಾಡಿದ್ದಾರೆ.
ಪರಿಹಾರ ಮಂಜೂರು ಮಾಡಿದ ಮಾಜಿ ಸಿಎಂ ಯಡಿಯೂರಪ್ಪ, ಹಣ ಬಿಡುಗಡೆ ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.
Key words: 5 lakh -compensation -released –journalist- family -members
ENGLISH SUMMARY…
Five lakh compensation released to the kith of journos who died of COVID
Bengaluru, October 8, 2021 (www.justkannada.in): The State Government has released a sum of Rs. 5 lakh compensation to the family members of three journalists who died of COVID.
The Karnataka Working Journalists’ Association had appealed to the former Chief Minister B.S. Yeddyurappa to extend help to journalists Swamigowda, former President of the Channarayapatna Taluk Working Journalists’ Association, Gangadhar Hoogar, Reporter, Indian Express, Haveri, and Maruti Rao Tandale, Photo Journalist, Bidar, following which a sum of Rs. 5 lakh compensation was sanctioned.
The present Chief Minister Basavaraj Bommai today released the compensation amount to the family members of the deceased persons.
The Karnataka State Working Journalists Association President Shivanand Tagadur has extended his gratitude to the Chief Minister Basavaraj Bommai and former Chief Minister B.S. Yeddyurappa for the same.
Keywords: KUWJ/ compensation/ journos/ COVID