ಬೆಳಗಾವಿ,ಡಿಸೆಂಬರ್,2,2020(www.justkannada.in): ಕೋವಿಡ್ ನಿಂದ ಮೃತಪಟ್ಟ ಬೆಳಗಾವಿ ಜಿಲ್ಲೆಯ ರಾಯಬಾಗ ಪ್ರಜಾವಾಣಿ ವರದಿಗಾರ ಮಲ್ಲಪ್ಪ ಎಚ್ ರಾಮದುರ್ಗ ಅವರ ಕುಟುಂಬಕ್ಕೆ 5 ಲಕ್ಷ ರೂ ಪರಿಹಾರವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಂಜೂರು ಮಾಡಿದ್ದಾರೆ.
ಇತ್ತೀಚೆಗೆ ಕೋವಿಡ್ ಗೆ ಬಲಿಯಾದ ಪತ್ರಕರ್ತ ಮಲ್ಲಪ್ಪ ಎಚ್ ರಾಮದುರ್ಗ ಕುಟುಂಬಕ್ಕೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ(KUWJ)ದ ಮನವಿ ಮೇರೆಗೆ ಸರ್ಕಾರದಿಂದ 5 ಲಕ್ಷ ರೂ ನೆರವು ನೀಡಲಾಗಿದೆ. ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಪತ್ರಕರ್ತ ಚಿದಾನಂದ ಪಟೇಲ್ ಅವರು ಸಿಎಂ ಭೇಟಿ ಮಾಡಿ ಮನವಿ ಸಲ್ಲಿದ್ಧರು.
ಪತ್ರಕರ್ತ ಮಲ್ಲಪ್ಪ ರಾಮದುರ್ಗ ಅವರ ಕುಟುಂಬ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಬಗ್ಗೆ ಬೆಳಗಾವಿ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ ಮತ್ತು ರಾಜ್ಯ ಸಂಘದ ಉಪಾಧ್ಯಕ್ಷ ಪುಂಡಲಿಕ ಬಾಳೋಜಿ ಅವರು ರಾಜ್ಯ ಸಂಘಕ್ಕೆ ಮನವಿ ಮಾಡಿದ್ದರು. ಬಳಿಕ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ಸಿಎಂಗೆ ಮೃತ ಪತ್ರಕರ್ತ ಮಲ್ಲಪ್ಪ ಎಚ್ ರಾಮದುರ್ಗ ಅವರ ಕುಟುಂಬದ ಸಂಕಷ್ಟದ ಬಗ್ಗೆ ತಿಳಿಸಿ ಪರಿಹಾರ ನೀಡುವಂತೆ ಮನವಿ ಮಾಡಿತ್ತು.
ಇದೀಗ ಸಂಘದ ಮನವಿಗೆ ಸ್ಪಂದಿಸಿ ಸಿಎಂ ಯಡಿಯೂರಪ್ಪ ಪರಿಹಾರ ಮಂಜೂರು ಮಾಡಿದ್ದು, ಸಿಎಂ ಬಿಎಸ್ ವೈಗೆ ಕೆಯುಡಬ್ಲ್ಯೂಜೆ ಕೃತಜ್ಞತೆಗಳನ್ನು ಸಲ್ಲಿಸಿದೆ.
english summary….
Rs. 5 lakh compensation granted to the family of the journalist who died of Covid
Belagavi, Dec.2, 2020 (www.justkannada.in): Chief Minister B.S. Yedyurappa has granted a sum of Rs.5 lakh compensation to the kin of Prajavani Kannada news correspondent of Raibagh, Belagavi district Mallappa H. Ramadurga, who died recently due to Covid.
The compensation has been provided upon the request made by the Karnataka Union of Working Journalists (KUWJ). Association President Shivanand Tagaduru and journalist Chidanand Patel had visited the CM and submitted the appeal.
Keywords: Rs. 5 lakh compensation to kin of journalist/ CM B S Yedyurrappa/ KUWJ
Key words: 5 lakh – covid-death-journalist family – Relief -granted.