ಬೆಳಗಾವಿ,ಆ,8,2019(www.justkannada.in): ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆ ಮತ್ತೆ ಕೊಯ್ನಾ ಡ್ಯಾಂನಿಂದ 5 ಲಕ್ಷ ಕ್ಯೂಸೆಕ್ಸ್ ನೀರನ್ನ ಕೃಷ್ಣ ನದಿಗೆ ಹರಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನಾವೀಸ್ ನಮ್ಮ ರಾಜ್ಯದ ಸಿಎಂ ಬಿಎಸ್ ಯಡಿಯೂರಪ್ಪಗೆ ಕರೆ ಮಾಡಿ ಕೊಯ್ನಾ ಡ್ಯಾಂನಿಂದ ಮತ್ತೆ 5 ಲಕ್ಷ ಕ್ಯೂಸೆಕ್ಸ್ ನೀರು ಬಿಡುವುದಾಗಿ ಮಾಹಿತಿ ನೀಡಿದ್ದರು. ಬಳಿಕ ಕೊಯ್ನಾಡ್ಯಾಂ ನಿಂದ ಕೃಷ್ಣಾ ನದಿಗೆ ನೀರು ರಿಲೀಸ್ ಮಾಡಲಾಗಿದ್ದು ಮತ್ತಷ್ಟು ಪ್ರವಾಹ ಪರಿಸ್ಥಿತಿ ಹೆಚ್ಚಲಿದೆ.
ಮತ್ತೆ 5 ಲಕ್ಷ ಕ್ಯೂಸೆಕ್ಸ್ ನೀರು ಬಿಟ್ಟಿರುವುದರಿಂದ ಮತ್ತಷ್ಟು ಗ್ರಾಮಗಳು ಮುಳುಗುವ ಭೀತಿ ಎದುರಾಗಿದೆ. ಈಗಾಗಲೇ ಭಾರಿ ಮಳೆಯಿಂದಾಗಿ ಉತ್ತರ ಕರ್ನಾಟಕ ತತ್ತರಿಸಿದ್ದು ಸಿಎಂ ಬಿಎಸ್ ಯಡಿಯೂರಪ್ಪ ಪ್ರವಾಹ ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ.
Key words: 5 lakh -cusecs –water- released – Koina dam- Krishna river