50 ಕೋಟಿ ಆಮಿಷ ಆರೋಪ: ಸಾಕ್ಷಿ ಒದಗಿಸಿ ಇಲ್ಲದಿದ್ದರೇ ಕ್ಷಮೆ ಕೇಳಿ- ಸಿ.ಟಿ ರವಿ ಕಿಡಿ

ಬೆಂಗಳೂರು,ನವೆಂಬರ್,14,2024 (www.justkannada.in):  ಕಾಂಗ್ರೆಸ್ ಶಾಸಕರಿಗೆ 50 ಕೋಟಿ ರೂ. ಆಮಿಷವೊಡ್ಡಿದ್ದಾರೆ ಎಂಬ ಸಿಎಂ ಸಿದ್ದರಾಮಯ್ಯ ಆರೋಪಕ್ಕೆ ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಕಿಡಿಕಾರಿದ್ದಾರೆ.

ಈ ಕುರಿತು ಮಾತನಾಡಿದ ಎಂಎಲ್ ಸಿ ಸಿ.ಟಿ ರವಿ,  ಯಾರು ಯಾರನ್ನ ಯಾವಾಗ ಖರೀದಿಸಲು ಯತ್ನಿಸಿದ್ರು? ಸಾಕ್ಷಿಗಳು ಇದ್ದರೆ ದೂರು ಕೊಡಿ. ಇಲ್ಲದಿದ್ದರೇ ಸಾರ್ವಜನಿಕವಾಗಿ ಕ್ಷಮೆ ಕೇಳಿ ಎಂದು ಆಗ್ರಹಿಸಿದರು.

ಸಿದ್ದರಾಮಯ್ಯ ಸಿಎಂ ಸ್ಥಾನದ ಜವಾಬ್ದಾರಿ ಮರೆತು ಆರೋಪಿಸುತ್ತಿದ್ದಾರೆ. ಬಿಜೆಪಿ ಮೇಲೆ ತಪ್ಪು ಅಭಿಪ್ರಾಯ ಮೂಡಿಸಲು ಯತ್ನಿಸುತ್ತಿದ್ದಾರೆ.  ನಿಮ್ಮ ಇತ್ತೀಚಿನ ನಡವಳಿಕೆ ನೋಡಿದಾಗ ದಿನನಿತ್ಯ ಸುಳ್ಳು ಹೇಳುವುದು ನಿಮ್ಮ ರಾಜಕೀಯ ಭಾಗವಾಗಿದೆ. ಸಳ್ಳು ಹೇಳದೆ ಇದ್ದರೆ ನಿಮಗೆ ತಿಂದ ಅನ್ನ ಜೀರ್ಣವಾಗಲ್ಲ. ನಮ್ಮ ಪಕ್ಷದ ಮೇಲೆ ಯಾಕೆ ಸುಳ್ಳು ಆರೋಪ ಮಾಡುತ್ತೀರಿ ಎಂದು ವಾಗ್ದಾಳಿ ನಡೆಸಿದರು.

Key words: 50 crore, allegation, CM, Siddaramaiah, CT Ravi