ಬೆಂಗಳೂರು,ಏಪ್ರಿಲ್,24,2021(www.justkannada.in): ರಾಜ್ಯದಲ್ಲಿ ಈವರೆಗೆ 510 ಮಂದಿ ಪೊಲೀಸರಿಗೆ ಕೊರೋನಾ ಸೋಂಕು ತಗುಲಿದೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದರು.
ಮಾಧ್ಯಮಗಳ ಜತೆ ಇಂದು ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಬೆಂಗಳೂರಿನಲ್ಲಿ 307 ಮಂದಿ, ಜಿಲ್ಲೆಗಳಲ್ಲಿ 208 ಮಂದಿಗೆ ಕೊರೋನಾ ತಗುಲಿದೆ. ಕೊರೋನಾದಿಂದ ನಾಲ್ವರು ಪೊಲೀಸರುಯ ಮೃತಪಟ್ಟಿದ್ದಾರೆ. 75 ಸಾವಿರ ಪೊಲೀಸರಿಗೆ ಲಸಿಕೆ ಮೊದಲ ಡೋಸ್ ನೀಡಲಾಗಿದೆ. 50 ಸಾವಿರ ಸಿಬ್ಬಂದಿಗೆ 2ನೇ ಡೋಸ್ ನೀಡಲಾಗಿದೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ಅಕ್ರಮವಾಗಿ ರೆಮ್ಡಿಸಿವಿರ್ ಮಾರಾಟ ಮಾಡುತ್ತಿದ್ದ 16 ಮಂದಿಯನ್ನ ಬಂಧಿಸಲಾಗಿದೆ. ಮೈಸೂರು, ದಾವಣಗೆರೆಯಲ್ಲೂ ಆರೋಪಿಗಳನ್ನ ಬಂಧಿಸಲಾಗಿದೆ. ನಕಲಿ ರೆಮ್ಡಿಸಿವಿರ್ ಮಾರಾಟ ಮಾಡಲಾಗುತ್ತಿದೆ. ಅಂಥವರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.
Key words: 510 police – state – infected – coronavirus-Home Minister -Basavaraja Bommai.