ಮೈಸೂರು, ಆಗಸ್ಟ್ 27, 2021 (www.justkannada.in): ಹಿರಿಯ ನಾಗರಿಕರಿಗಾಗಿ ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿರುವ ಹಲವು ಯೋಜನೆಗಳ ಕುರಿತು ನಡೆಸಿದಂತಹ ಒಂದು ಸಮೀಕ್ಷೆಯಲ್ಲಿ ರಾಜ್ಯದಲ್ಲಿ 54% ಹಿರಿಯ ನಾಗರಿಕರು ಸಂತುಷ್ಠಿಯನ್ನು ವ್ಯಕ್ತಪಡಿಸಿದ್ದಾರೆ. ವಿವಿಧ ಯೋಜನೆಗಳ ಕುರಿತು ೦ ಯಿಂದ 5ರವರೆಗೆ ಅಂಕಗಳನ್ನು ನೀಡುವಂತೆ ಸಮೀಕ್ಷೆಯಲ್ಲಿ ಭಾಗವಹಿಸಿದವರಿಗೆ ಸೂಚಿಸಲಾಗಿತ್ತು. ಆ ಪ್ರಕಾರವಾಗಿ ಅತೀ ಹೆಚ್ಚಿನ ಅಂಕ ೩.೬.
ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ (ಕೆಇಎ) ಈ ವರ್ಷದ ಆರಂಭದಲ್ಲಿ ಈ ಸಮೀಕ್ಷೆಯನ್ನು ನಡೆಸಿತು. ಒಟ್ಟು ೬,೦೮೭ ಫಲಾನುಭವಿಗಳನ್ನು ಸಂದರ್ಶಿಸಲಾಯಿತು. ಈ ಪೈಕಿ ಇಂದಿರಾ ಗಾಂಧಿ ರಾಷ್ಟ್ರೀಯ ಪಿಂಚಣಿ ಯೋಜನೆಗೆ ೨,೯೯೪ ಹಾಗೂ ಸಂಧ್ಯಾ ಸುರಕ್ಷಾ ಯೋಜನೆಗೆ ೩,೦೯೩ ಮಂದಿಯನ್ನು ಸಂದರ್ಶಿಸಲಾಯಿತು. ಮೊದಲನೇ ವಿಷಯ, ಅಂದರೆ ಪಿಂಚಣಿ ಯೋಜನೆಗೆ ಸಂಬಂಧಿಸಿದಂತೆ ಸಮೀಕ್ಷೆ ನಡೆಸಿದ ಒಟ್ಟು ಜನರ ಪೈಕಿ ೫೭.೨%ರಷ್ಟು ಜನರು ಸಂತೃಪ್ತಿಯನ್ನು ವ್ಯಕ್ತಪಡಿಸಿದ್ದಾರೆ. ಸಂಧ್ಯಾ ಸುರಕ್ಷಾ ಯೋಜನೆ ಕುರಿತತಂತೆ ೫೦.೪% ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ. ಉಳಿದ ೪೦% ಜನರು ‘ಒಕೆ’ ಎಂದರೆ ೬.೪% ಜನರು ತಾವು ‘ಸಂತುಷ್ಠರಲ್ಲ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಸಮೀಕ್ಷೆಯನ್ನು ಮೈಸೂರು ಮೂಲದ ಗ್ರಾಸ್ ರೂಟ್ಸ್ ರೀಸರ್ಚ್ ಮತ್ತು ಅಡ್ವೊಕೆಸಿ ಮೂವ್ ಮೆಂಟ್ ನಡೆಸಿತು. ಪ್ರಾಥಮಿಕ ಮತ್ತು ಮಾಧ್ಯಮಿಕ ದತ್ತಾಂಶವನ್ನು ಬಳಸಿಕೊಂಡು ನಡೆಸಿದಂತಹ ಈ ಸಮೀಕ್ಷೆ, ಸರ್ಕಾರದ ಯೋಜನೆಗಳ ಕಾರ್ಯನಿರ್ವಹಣೆಯ ಮೌಲ್ಯಮಾಪನ ಮಾಡುವುದು ಹಾಗೂ ಬಡವರಿಗೆ ಅದರಿಂದ ಆಗುತ್ತಿರುವ ಉಪಯೋಗದ ಬಗ್ಗೆ ತಿಳಿದುಕೊಳ್ಳುವ ಗುರಿಯನ್ನು ಹೊಂದಿದೆ. ಜೊತೆಗೆ ಈ ಸಮೀಕ್ಷೆಯು ಪಿಂಚಣಿ ಸೌಲಭ್ಯ ಪಡೆಯಲು ಎಷ್ಟು ಜನರು ಫಲಾನುಭವಿಗಳ ಆಧಾರ್ ಸಂಪರ್ಕಿತ ಡಿಬಿಟಿ ವ್ಯಾಪ್ತಿ ಎಷ್ಟು ಎಂದು ತಿಳಿದುಕೊಳ್ಳುವುದಾಗಿದೆ. ಈ ಸಮೀಕ್ಷೆಯ ವರದಿಯು ಯೋಜನೆ ಅನುಷ್ಠಾನದಲ್ಲಿ ಹಲವು ಕೊರತೆಗಳನ್ನು ಗುರುತಿಸಿದ್ದು, ಹೆಚ್ಚು ಪರಿಣಾಮಕಾರಿ ಅನುಷ್ಠಾನಕ್ಕೆ ಹಲವು ಶಿಫಾರಸ್ಸುಗಳನ್ನೂ ಸಹ ಮಾಡಿದೆ.
ಈ ಕುರಿತು ಮಾತನಾಡಿದ ಗ್ರಾಂನ ಕಾರ್ಯನಿರ್ವಾಹಕ ನಿರ್ದೇಶಕ ಬಸವರಾಜು ಆರ್. ಶ್ರೇಷ್ಠ ಅವರು ಕುಟುಂಬದ ಆರೈಕೆ ಹಾಗೂ ಬೆಂಬಲ ಒಳಗೊಂಡಂತೆ ಹಿರಿಯ ನಾಗರಿಕರಿಗೆ ಒದಗಿಸಿರುವ ಸಾಮಾಜಿಕ ಬೆಂಬಲ ವ್ಯವಸ್ಥೆಯ ಅಂಶಗಳು, ಸಮೀಕ್ಷೆಯ ಈ ಪ್ರತಿಕ್ರಿಯೆ ಮೇಲೆ ಪ್ರಭಾವ ಬೀರಿರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಸ್ಪರ್ಶ ಟ್ರಸ್ಟ್ ನ ಗೋಪಿನಾಥ್ ಆರ್ ಅವರು ಹೇಳಿದಂತೆ, ಗ್ರಾಮಗಳು ಹಾಗೂ ಸಮುದಾಯಗಳಲ್ಲಿ ಹಿರಿಯ ನಾಗರಿಕರಲ್ಲಿ ನಡೆಸಿದಂತಹ ಇತರೆ ಇದೇ ರೀತಿಯ ಸಮೀಕ್ಷೆಗಳಲ್ಲಿಯೂ ಶೇ.೫೦ ರಷ್ಟು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. “೧೦-೧೫% ಫಲಾನುಭವಿಗಳು ತಾವು ಯೋಜನೆಗಳಿಂದ ಸಂತುಷ್ಠರಲ್ಲ ಅಥವಾ ಹಲವು ಸವಾಲುಗಳನ್ನು ಎದುರಿಸಿದರು ಎಂದು ತಿಳಿಸಿದ್ದಾರೆ,” ಎಂದು ವಿವರಿಸಿದರು.
ಸಮೀಕ್ಷೆಯ ಪ್ರಮುಖ ಅವಲೋಕನಗಳು
ಈ ಯೋಜನೆಗಳು ಒಟ್ಟು ಫಲಾನುಭವಿಗಳ, ಒಂಟಿಯಾಗಿ ವಾಸಿಸುತ್ತಿರುವವರು ಅಥವಾ ಮಕ್ಕಳ ಬೆಂಬಲವಿಲ್ಲದೆ ಗಂಡ/ಹೆಂಡತಿಯೊಂದಿಗೆ ವಾಸಿಸುತ್ತಿರುವ ಫಲಾನುಭವಿಗಳ ಪೈಕಿ ಐದನೇ ಒಂದು ಭಾಗದಷ್ಟು ಫಲಾನುಭವಿಗಳಿಗೆ ಬೆಂಬಲ ಮೂಲವಾಗಿದೆ.
ಪಿಂಚಣಿ ಲಭಿಸುತ್ತಿರುವ ಹೊರತಾಗಿಯೂ ಸ್ವಲ್ಪ ಪ್ರಮಾಣದಲ್ಲಿ ಹಿರಿಯ ನಾಗರಿಕರು ಜೀವನೋಪಾಯಕ್ಕಾಗಿ ಕೆಲಸವನ್ನು ಮಾಡುತ್ತಿದ್ದಾರೆ. ಸಂಧ್ಯ ಸುರಕ್ಷಾ ಯೋಜನೆಯ ೪.೬% ಮತ್ತು ಪಿಂಚಣಿ ಯೋಜನೆಯ ೮% ಫಲಾನುಭವಿಗಳು ಈಗಲೂ ದುಡಿಯುತ್ತಿದ್ದಾರೆ. ಸಂಧ್ಯಾ ಸುರಕ್ಷಾ ಯೋಜನೆಯ ೩% ಫಲಾನುಭವಿಗಳು ಮತ್ತು ಪಿಂಚಣಿ ಯೋಜನೆಯ ೮% ಫಲಾನುಭವಿಗಳ ಪೈಕಿ, ೮೦ ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರು ಇನ್ನೂ ದುಡಿಯುತ್ತಿದ್ದಾರೆ.
ಪಿಂಚಣಿ ಪಡೆಯುವ ಫಲಾನುಭವಿಗಳು ಪಿಂಚಣಿ ಮೊತ್ತದ ಪೈಕಿ ಬಹುಪಾಲನ್ನು (೨೫%) ಆಹಾರಕ್ಕೆ ವ್ಯಯಿಸಿದರೆ, ೧೭% ಫಲಾನುಭವಿಗಳು ವೈದ್ಯಕೀಯ ವೆಚ್ಚಗಳಿಗೆ ವ್ಯಯಿಸುತ್ತಿದ್ದಾರೆ.
ಪಿಂಚಣಿ ಮೊತ್ತು ಬಹಳ ಕಡಿಮೆಯಾದರೂ ಸಹ ೩೦%ರಷ್ಟು ಫಲಾನುಭವಿಗಳು ಅದನ್ನು ತಮ್ಮ ಕುಟುಂಬದ ಸದಸ್ಯರೊಂದಿಗೆ ಹಂಚಿಕೊಳ್ಳುತ್ತಾರೆ. ಈ ಪೈಕಿ ೭೯%ರಷ್ಟು ಫಲಾನುಭವಿಗಳು ಅನಕ್ಷರಸ್ಥರಾಗಿದ್ದಾರೆ.
ಸಂಧ್ಯಾ ಸುರಕ್ಷಾ ಯೋಜನೆಯ ೩೭% ಫಲಾನುಭವಿಗಳು ಮತ್ತು ಪಿಂಚಣಿ ಯೋಜನೆಯ ೩೭.೪% ಫಲಾನುಭವಿಗಳು ಅರ್ಜಿಗಳನ್ನು ಸಲ್ಲಿಸಲು ವಯಸ್ಸಿನ ಕಾರಣದಿಂದಾಗಿ ಅಥವಾ ವೇತನ ಕಳೆದುಕೊಳ್ಳುವ ಕಾರಣದಿಂದಾಗಿ ಮತ್ತು ದೂರ ಎಂಬ ಕಾರಣಕ್ಕಾಗಿ ಸೌಲಭ್ಯವನ್ನು ಪಡೆಯಲು ತಾಲ್ಲೂಕು ಕಚೇರಿಗೆ ಹೋಗುವುದು ಕಷ್ಟ ಎಂದು ತಿಳಿಸಿದ್ದಾರೆ. ದೊಡ್ಡ ಪ್ರಮಾಣದ ಫಲಾನುಭವಿಗಳನ್ನು ಡೈರೆಕ್ಟ್ ಬೆನೆಫಿಟ್ ಟ್ರಾನ್ಸ್ಫರ್ (ಡಿಬಿಟಿ) ಅಡಿ ಸೇರ್ಪಡೆ ಮಾಡಲಾಗಿದೆ.
ಸುದ್ದಿ ಮೂಲ: ಟೈಮ್ಸ್ ಆಫ್ ಇಂಡಿಯಾ
Key words: 54% -senior citizens – Karnataka – happy -about – pension scheme-Survey