ಬೆಂಗಳೂರು,ಜನವರಿ,27,2021(www.justkannada.in): ಕೇಂದ್ರ ಕೃಷಿ ಕಾಯ್ದೆ ವಿರೋಧಿಸಿ ರೈತರು ಪ್ರತಿಭಟನೆ, ಹಿಂಸಾಚಾರ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾಜಿ ಸಿಎಂ ಸಿದ್ಧರಾಮಯ್ಯ ಗುಡುಗಿದ್ದಾರೆ.
ಬೆಂಗಳೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ವಿಪಕ್ಷ ನಾಯಕ ಸಿದ್ಧರಾಮಯ್ಯ, ರೈತರು ಚಳಿ ಬಿಸಿಲು ಎನ್ನದೇ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರಧಾನಿ ಮೋದಿ 56 ಇಂಚಿನ ಎದೆ ಇದೆ ಎನ್ನುತ್ತಾರೆ. ಆದರೆ ಎದೆ ಇದ್ದರೇ ಸಾಲದು. ಅದರೊಳಗೆ ಹೃದಯವಿರಬೇಕು. ರೈತರ ಕಣ್ಣೀರೊರೆಸುವ ಗುಣವಿರಬೇಕು ಎಂದು ಕಿಡಿಕಾರಿದರು.
ಕೃಷಿ ತಿದ್ದುಪಡಿ ಕಾಯ್ದೆ ವಾಪಸ್ ಪಡೆಯಲ್ಲ ಎಂದು ಅಂಬಾನಿ ಅದಾನಿಗೆ ಪ್ರಧಾನಿ ಮೋದಿ ಮಾತು ಕೊಟ್ಟಿದ್ದಾರೆ. ಹೀಗಾಗಿ ಹಿಂಪಡೆಯುತ್ತಿಲ್ಲ. ಪ್ರಧಾನಿ ಮೋದಿ ಅಂಬಾನಿ ಅದಾನಿಯ ಗುಲಾಮರಾಗಿದ್ದಾರೆ. ಕಣ್ಣೊರೆಸುವ ತಂತ್ರವಾಗಿ ರೈತರ ಜತೆ ಸಭೆ ನಡೆಸಿದ್ದಾರೆ. 11 ಬಾರಿ ರೈತರ ಜತೆ ಮಾತುಕತೆ ನಡೆಸಿದ್ದಾರೆ. ಸಮಸ್ಯೆ ಇತ್ಯಾರ್ಥಕ್ಕೆ 11 ಬಾರಿ ಚರ್ಚಿಸಬೇಕೆ..? ಎಂದು ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದರು.
ENGLISH SUMMARY….
Having 56″ chest is not enough, you should have a heart of wiping farmers’ tears: Siddu
Bengaluru, Jan. 27, 2021 (www.justkannada.in): Following the farmers’ protest against the Central Govt.’s new farm laws and the violence that took place in Delhi on Republic Day, former Chief Minister Siddaramaiah has criticized Prime Minister Narendra Modi for his adamant attitude.
Speaking to the presspersons in Bengaluru today, the leader of opposition in the Assembly Siddarmaiah said, “Farmers are protesting from many days without hesitation of heat and cold. People say Prime Minister Modi has 56″ chest. It is not enough if you have just that you should have a heart in it, you should have a character of wiping the tears of farmers.”
“Narendra Modi has promised industrialists Ambani and Adani that the Central Govt. would not withdraw the new farm laws hence, he is behaving like this. The Prime Minister is a slave of those industrialists. Conducting talks with the farmers is just a drama. You all know what happened even after conducting 11 meetings with the farmers. Do you need to discuss 11 times to solve the problem?” he said.
Keywords: Former CM Siddaramaiah/ Prime Minister Narendra Modi adamant/ 56″ chest
Key words: 56-inch –chest- PM Modi- Farmers – tears-former cm- Siddaramaiah