ನವದೆಹಲಿ,ಫೆಬ್ರವರಿ,1,2023(www.justkannada.in): ಕೇಂದ್ರ ಬಜೆಟ್ ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5,630 ಕೋಟಿ ಘೋಷಣೆ ಮಾಡುವ ಮೂಲಕ ಕರ್ನಾಟಕಕ್ಕೆ ಬಂಪರ್ ಗಿಫ್ಟ್ ನೀಡಿದೆ.
ಇಂದು ಲೋಕಸಭೆಯಲ್ಲಿ2023-24ನೇ ಸಾಲಿನ ಬಜೆಟ್ ಮಂಡಿಸುತ್ತಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಘೋಷಣೆ ಮಾಡಿದ್ದಾರೆ. ಹಾಗೆಯೇ ಕೃಷಿ ಸಾಲಕ್ಕೆ 20 ಲಕ್ಷ ಕೋಟಿ ಮೀಸಲಿಡಲಾಗುವುದು. ಯುವ ಸಬಲೀಕರಣ, ಮಹಿಳಾ ಸಬಲೀಕರಣ. ಹಿಂದುಳಿದ ವರ್ಗಗಳ ಮೇಲೆ ಬಜೆಟ್ ನಲ್ಲಿ ಆದ್ಯತೆ ನೀಡಲಾಗಿದೆ. ಪ್ರಮುಖ ಮೂರು ಅಂಶಗಳ ಮೇಲೆ ಬಜೆಟ್ ಮಂಡನೆ ಮಾಡಲಾಗುತ್ತಿದೆ ಎಂದರು.
ಕೃಷಿಯಲ್ಲಿ ಸ್ಟಾರ್ಟ್ ಅಪ್ ಗಳಿಗೆ ಆದ್ಯತೆ. ಉಜ್ವಲ ಯೋಜನೆಯಲ್ಲಿ 9.6 ಲಕ್ಷ ಗ್ಯಾಸ್ ವಿತರಣೆ ಮಾಡಲಾಗಿದೆ. ಶ್ರೀಅನ್ನ ಜೋಳ, ಶ್ರೀ ಅನ್ನರಾಗಿ, ಶ್ರೀಅನ್ನ ಗೋಧಿ, ಸಿರಿಧಾನ್ಯಗಳ ಕೃಷಿ ಯೋಜನೆಗೆ ಹೊಸ ಯೋಜನೆ. ಸಿರಿಧಾನ್ಯ ಕೃಷಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
Key words: 5,630 crore-announced – Bhadra- Upper -Bank -Project – Union Budget