ಬೆಂಗಳೂರು, ಜನವರಿ 12, 2021(www.justkannada.in): ರಾಜ್ಯಕ್ಕೆ ಮೊದಲ ಹಂತದಲ್ಲಿ 54 ಬಾಕ್ಸ್ ಗಳಲ್ಲಿ 6.48 ಲಕ್ಷ ಡೋಸ್ ಕೊರೊನಾ ಲಸಿಕೆ ಬಂದಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಕೊರೊನಾ ಲಸಿಕೆ ಆನಂದರಾವ್ ವೃತ್ತದ ಸಂಗ್ರಹ ಕೇಂದ್ರಕ್ಕೆ ಬಂದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. 6.48 ಲಕ್ಷ ಡೋಸ್ 54 ಬಾಕ್ಸ್ ಗಳಲ್ಲಿ ಬಂದಿದ್ದು, ಉತ್ತಮವಾಗಿ ಪ್ಯಾಕೇಜ್ ಮಾಡಿ ತರಲಾಗಿದೆ. ನಿರ್ದಿಷ್ಟ ತಾಪಮಾನದಲ್ಲಿ ತಂದ ಲಸಿಕೆಯನ್ನು ಸಂಗ್ರಹ ಕೇಂದ್ರದಲ್ಲಿ ಇಡಲಾಗಿದೆ. ನಾಳೆ ಬೆಳಗಾವಿಗೆ 1.40 ಲಕ್ಷ ಡೋಸ್ ಲಸಿಕೆ ಬರಲಿದೆ.
ಇದಕ್ಕಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಆತ್ಮನಿರ್ಭರ ಭಾರತ ಪರಿಕಲ್ಪನೆಯಡಿ ಪ್ರಧಾನಿ ಮೋದಿಯವರು ಕಂಪನಿಗಳಿಗೆ ಸಹಕಾರ ನೀಡಿರುವುದರಿಂದ ಕೇವಲ 210 ರೂ.ಗೆ ಲಸಿಕೆ ದೊರೆಯುತ್ತಿದೆ. ಕೊರೊನಾ ನಿಯಂತ್ರಣಕ್ಕೆ ಶ್ರಮಿಸಿದ ಎಲ್ಲ ಸಿಬ್ಬಂದಿ ಜನವರಿ 16 ರಿಂದ ಆರಂಭವಾಗುವ ಲಸಿಕೆ ನೀಡುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು. ಇದಕ್ಕಾಗಿ ಮಾರ್ಗಸೂಚಿ ನೀಡಲಾಗುವುದು ಎಂದರು.
ಇನ್ನೂ ನಾಲ್ಕು ಕಂಪನಿಗಳು ಲಸಿಕೆ ತಯಾರಿಸಲಿವೆ. ಅದು ಬಂದ ಬಳಿಕ ಹೆಚ್ಚು ಜನರಿಗೆ ಲಸಿಕೆ ನೀಡಲು ಸಾಧ್ಯವಾಗುತ್ತದೆ. ಲಸಿಕೆಗಳನ್ನು ಸುರಕ್ಷಿತವಾಗಿ ತಂದು ದಾಸ್ತಾನು ಮಾಡುವ ಅನುಭವ ನಮ್ಮ ಸಿಬ್ಬಂದಿಗಿದೆ. ಆರೋಗ್ಯ ಇಲಾಖೆಯ ಅಧಿಕಾರಿಗಳ ಕಾರ್ಯಕ್ಷಮತೆ ಮೇಲೆ ಯಾರಿಗೂ ಅಪನಂಬಿಕೆ ಬೇಡ. ಎಲ್ಲ ಪ್ರಕ್ರಿಯೆಗಳು ನಿಯಮದಂತೆ ನಡೆಯುತ್ತಿವೆ ಎಂದರು.
2 ಲಕ್ಷಕ್ಕೂ ಹೆಚ್ಚು ಸಿಬ್ಬಂದಿ ಲಸಿಕೆ ನೀಡಲಿದ್ದು, ಎಲ್ಲರಿಗೂ ತರಬೇತಿ ನೀಡಲಾಗಿದೆ. ಅಡ್ಡಪರಿಣಾಮಗಳು ಬರಲು ಸಾಧ್ಯವೇ ಇಲ್ಲ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಲಸಿಕೆ ನೀಡುವ ಸ್ಥಳದಲ್ಲಿ ನಿಗಾ ಇರಿಸಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಲಸಿಕೆ ಬಾಕ್ಸ್ ಬಹಳ ಭಾರವಾಗಿದ್ದು, ಸಿಬ್ಬಂದಿಯೊಬ್ಬರ ಕೈ ತಪ್ಪಿ ಸ್ವಲ್ಪ ಜಾರಿದೆ. ಇದರಿಂದ ಏನೂ ಸಮಸ್ಯೆಯಾಗಿಲ್ಲ. ಆತಂಕ ಬೇಡ ಎಂದು ಸ್ಪಷ್ಟಪಡಿಸಿದರು.
ENGLISH SUMMARY….
State received its first consignment of Covid-19 vaccine of 6.48 lakh doses
Dr.Sudhakar visits storage facility in Bengaluru
Vaccine is completely safe and another consignment will be received soon: Health & Medical Education Minister Dr.K.Sudhakar
Bengaluru, January 12, 2021:
6.48 lakh doses of Covid-19 vaccine in 54 boxes has arrived in Bengaluru today, and they have been stored in storage facility near Anand Rao circle, said Health & Medical Education Minister Dr.K.Sudhakar
He was speaking to the media after inspecting the vaccine. 6.48 lakh doses packed in 54 boxes have been received in good condition and stored in a set temperature here. Tomorrow 1.40 lakh doses of vaccine will be received in Belagavi, said the Minister.
Congratulating PM Modi and CM B.S.Yediyurappa for the initiative Dr.Sudhakar said, local companies are manufacturing the vaccine for Rs.210 Rs. under Atmanirbhar Bharat. All health warriors who are relentlessly working in this fight against Covid-19 will get the vaccine in the first phase starting January 16th. Guidelines will be issued in this regard soon, he said.
More people will be vaccinated after 4 months as more number of vaccine would be manufactured by then. Staff are trained for safe handling and transportation of vaccines. There is no doubt about the efficiency of officials of health department. Everything is being carried out as per the rules. 2 lakh staff have been trained to administer vaccine, said the Minister.
Key words: 6.48 lakh- doses –vaccine- Minister -Dr K Sudhakar