ಬೆಳಗಾವಿ,ಏಪ್ರಿಲ್ ,1,2024 (www.justkannada.in): ರಾಜ್ಯದಲ್ಲಿ ಏಪ್ರಿಲ್ 26 ಮತ್ತು ಮೇ 7 ರಂದು ಎರಡು ಹಂತದಲ್ಲಿ ಲೋಕಸಭಾ ಚುನಾವಣೆ ನಡೆಯಲಿದ್ದು ಮಾದರಿ ನೀತಿ ಸಂಹಿತೆ ಜಾರಿಯಾಗಿದೆ. ಚುನಾವಣಾ ಅಕ್ರಮ ತಡೆಗಟ್ಟಲು ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಈ ಮಧ್ಯೆ ಅಕ್ರಮವಾಗಿ ಸಾಗಿಸುತ್ತಿದ್ದ 6.65 ಲಕ್ಷ ರೂ. ಹಣವನ್ನ ಚುನಾವಣಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಬೆಳಗಾವಿಯ ಚಿಕ್ಕೋಡಿ ಚೆಕ್ ಪೋಸ್ಟ್ ನಲ್ಲಿ ವಶಕ್ಕೆ ಪಡೆಯಲಾಗಿದೆ. ಬೆಳಗಾವಿಯ ಗಡಿಗೆ ಹೊಂದಿಕೊಂಡಿರುವ ಬಾಚಿ ಚೆಕ್ ಪೋಸ್ಟ್ ನಲ್ಲಿ ಚುನಾವಾಣಾಧಿಕಾರಿ ಪ್ರಶಾಂತ್ ದೀಕ್ಷಿತ ಅವರ ತಂಡ 6.65 ಲಕ್ಷ ವಶಪಡಿಸಿಕೊಂಡಿದ್ದಾರೆ.
ಅಮೂಲ್ ವಿದ್ಯಾಧರ ಎಂಬುವವರು ಸೇರಿದ ಹಣವಾಗಿದ್ದು, ತಡರಾತ್ರಿ 12 ಗಂಟೆ ವೇಳೆಗೆ 6.65 ಲಕ್ಷ ಹಣವನ್ನ ದಾಖಲೆ ಇಲ್ಲದೆ ಸಾಗಿಸುತ್ತಿದ್ದರು. ಈ ವೇಳೇ ಬಾಚಿ ಚೆಕ್ ಪೋಸ್ಟ್ ಬಳಿ ಅಧಿಕಾರಿಗಳು ತಪಾಸಣೆ ನಡೆಸಿದಾಗ ಹಣ ಪತ್ತೆ ಆಗಿದ್ದು, ಹಣವನ್ನು ಜಪ್ತಿ ಮಾಡಲಾಗಿದೆ ಎನ್ನಲಾಗಿದೆ.
Key words: 6.65 lakh, money, illegally, Siege