ಮೈಸೂರು,ಸೆಪ್ಟಂಬರ್,3,2021(www.justkannada.in): ಮೈಸೂರಿನ ನಾಗರಹೊಳೆ ವೀರನಹೊಸಹಳ್ಳಿ ವಲಯದ ವ್ಯಾಪ್ತಿಯಲ್ಲಿ 60 ವರ್ಷದ ಆನೆ ಸೋಲಾರ್ ಬೇಲಿ ದಾಟುವ ವೇಳೆ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.
ಅಗಸನಹುಂಡಿ ಶಾಖೆಯ ಬಿ.ಆರ್.ಕಟ್ಟೆ ಬೀಟ್ ನ ಹಾವಿನಗುಂಡಿ ಮೂಲೆ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಕಾಡಿನಿಂದ ನಾಡಿಗೆ ಬರುವ ಭರದಲ್ಲಿ ಆನೆ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಸೋಲಾರ್ ಬೇಲಿ ದಾಟುವ ವೇಳೆ ಕೆಳಗೆ ಬಿದ್ದು ಮೇಲೆಳಲು ಸಾಧ್ಯವಾಗದೆ ಸಲಗ ಮೃತಪಟ್ಟಿದೆ ಎನ್ನಲಾಗಿದೆ.
ಮರಣೋತ್ತರ ಪರೀಕ್ಷೆಯಿಂದ ನಿಖರ ಮಾಹಿತಿ ಲಭ್ಯವಾಗಲಿದ್ದು, ಸ್ಥಳಕ್ಕೆ ಹಿರಿಯ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Key words: 60-year- elephant -dies – Nagarhole-Mysore