ಮೈಸೂರಿನಲ್ಲಿ 66ನೇ ಕನ್ನಡ ರಾಜ್ಯೋತ್ಸವ ಸಂಭ್ರಮ: ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ.

ಮೈಸೂರು,ನವೆಂಬರ್,1,2021(www.justkannada.in):  ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ 66ನೇ ಕನ್ನಡ ರಾಜ್ಯೋತ್ಸವ ಸಂಭ್ರಮ ಮನೆ ಮಾಡಿದ್ದು, ಮೈಸೂರು ಜಿಲ್ಲಾಡಳಿತದ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಯಿತು.

ಮೈಸೂರು ಅರಮನೆಯಲ್ಲಿ ತಾಯಿ ಭುವನೇಶ್ವರಿ ದೇವಿಗೆ ಉಸ್ತುವಾರಿ ಸಚಿವ ಎಸ್‌.ಟಿ ಸೋಮಶೇಖರ್ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಕೋಟೆ ಆಂಜನೇಯ ದೇವಸ್ಥಾನದ ಮುಂಭಾಗ ಕನ್ನಡ ರಾಜ್ಯೋತ್ಸವದ ಅಂಗವಾಗಿ  ಗಣ್ಯರು ರಾಷ್ಟ್ರ ಹಾಗೂ ನಾಡ ಧ್ವಜಾರೋಹಣ ಮಾಡುವ ಮೂಲಕ ನಾಡಿನ ಜನರಿಗೆ ರಾಜ್ಯೋತ್ಸವ ಸಂದೇಶ ಸಾರಿದರು.

ಈ ವೇಳೆ  ಅಶ್ವಾರೋಹಿ ಹಾಗೂ ಪೊಲೀಸ್ ಸಿಬ್ಬಂದಿಗಳಿಂದ ಧ್ವಜ ವಂದನೆ ನಡೆಸಲಾಯಿತು. ಕಾರ್ಯಕ್ರಮದಲ್ಲಿ 36 ಗಣ್ಯರಿಗೆ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು.

Key words: 66th– Kannada Rajyotsava- celebration –Mysore-District Level -Rajyotsava Award- presented.

ENGLISH SUMMARY…

66th Kannada Rajyotsava celebrations at Mysuru: District-level Rajyotsava awards accorded
Mysuru, November 1, 2021 (www.justkannada.in): The 66th Kannada Rajyotsava was observed at Mysuru by the District Administration.
Mysuru District In-charge Minister S.T. Somashekar offered special puja to Goddess Bhuvaneshwari at the temple in the Ambavilasa Palace premises. Later the Kannada State flag was hoisted in front of the Kote Anjaneya Swamy temple in the presence of several dignitaries.
The mounted police offered the flag salute. About 36 persons were bestowed with the District-level Kannada Rajyotsava awards.
Keywords: 66th Kannada Rajyotsava/ celebrations/ at Mysuru/ district-level Rajyotsava awards