ಬೆಂಗಳೂರು,ಏಪ್ರಿಲ್,6,2021(www.justkannada.in): 6ನೇ ವೇತನ ಆಯೋಗದಂತೆ ವೇತನ ನೀಡಲು ಸಾಧ್ಯವಿಲ್ಲ. ನಾಳೆ ಮುಷ್ಕರಕ್ಕೆ ಮುಂದಾದರೇ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಎಚ್ಚರಿಕೆ ನೀಡಿದ್ದಾರೆ.
ನಾಳೆ ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಇಂದು ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಸಭೆ ನಡೆಯಿತು. ಸಭೆ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಸಿ.ಎಸ್ ರವಿಕುಮಾರ್, , ಸಾರಿಗೆ ನೌಕರರ ಪ್ರಮುಖ ಬೇಡಿಕೆಯಾಗಿರುವ 6ನೇ ವೇತನದ ಸಂಬಳವನ್ನು ಮಾಡಲು ಸಾಧ್ಯವೇ ಇಲ್ಲ, ಬದಲಿಗೆ ವೇತನದಲ್ಲಿ ಹೆಚ್ಚಳ ಮಾಡಲಾಗುವುದು. ಸಾರಿಗೆ ನೌಕರರ ಶೇ. 8 ರಷ್ಟು ವೇತನ ಹೆಚ್ಚಳಕ್ಕೆ ನಿರ್ಧಾರ ಮಾಡಲಾಗಿದೆ ಎಂದರು.
ಕೋವಿಡ್ ಹಿನ್ನೆಲೆ ಮುಷ್ಕರ ಕೈಬಿಡಿ. ನಿಮ್ಮ 8 ಬೇಡಿಕೆ ಈಡೇರಿಸಿದ್ದೇವೆ. ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ವೇತನ ಹೆಚ್ಚಳ ಮಾಡಲು ಸಾಧ್ಯವಾಗುತ್ತಿಲ್ಲ. ಲಾಕ್ ಡೌನ್ ಸಮಯದಲ್ಲೂ ಸಂಬಳ ನೀಡಲಾಗಿದೆ. ಸಾರಿಗೆ ಇಲಾಖೆಗೆ ನಷ್ಟ ಉಂಟಾದರೂ ಸಂಬಳ ನೀಡಿದ್ದೇವೆ.ನಾಳೆ ಸಾರಿಗೆ ನೌಕರರು ಮುಷ್ಕರ ಹೂಡಲು ಮುಂದಾದ್ರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಸಾರಿಗೆ ನೌಕರರ ಸಂದಾನ ಪ್ರಶ್ನೆಯೇ ಇಲ್ಲ. ಎಸ್ಮಾ ಜಾರಿ ಮಾಡುವ ಸಂಬಂದ ಚರ್ಚೆ ಮಾಡಿದ್ದೇವೆ ಎಂದು ಸಿಎಸ್ ರವಿಕುಮಾರ್ ತಿಳಿಸಿದರು.
ನಾಳೆ ಬೇಕಾಗಿರುವ ಎಲ್ಲಾ ಸಿದ್ದತೆಯನ್ನು ಮಾಡಿಕೊಳ್ಳಲಾಗಿದ್ದು, ಖಾಸಗಿಯವರ ನೆರವಿನೊಂದಿಗೆ ವಾಹನ ಸಂಚಾರ ನಡೆಸಲಾಗುವುದು. ಬಸ್ ಗಳಿಗೆ ಹಾನಿ ಮಾಡಿದರೇ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ENGLISH SUMMARY…
6th pay commission implementation not possible: CS warns stringent action if employees go for protest
Bengaluru, Apr. 6,2021 (www.justkannada.in): Chief Secretary of Government of Karnataka P. Ravikumar has said that it is not possible to provide salaries to the Transport Department employees as per the 6th pay commission and has warned of stringent action if they go with the protest.
A meeting was held today under the leadership of Chief Minister B.S. Yedyurappa to discuss the call of protest by the Transport Department employees tomorrow. Speaking to the press persons after the meeting the Chief Secretary Ravikumar informed that it was impossible to provide salaries as per the sixth pay commission and instead a nominal increase in salaries can be considered. The government has decided to increase salaries by 8%.
He also appealed to the employees to drop the protest keeping in mind the ongoing COVID-19 Pandemic. “We have already fulfilled your eight other demands. It is not possible to fulfill the demand of increasing wages as the election code of conduct is in force. We have paid you salaries even during the lockdown period. The Department has provided you salaries despite it incurred a loss. Despite all this, if you continue with your protest tomorrow stringent action will be initiated. There is no question of negotiation at all. We have also discussed implementing ESMA,” he added.
Further, he also informed that preparations have been made to make alternative arrangements with the help of private companies in case if the transport department employees go with protest. “If anyone causes damage to any vehicle strict action will be taken,” he said.
Keywords: KSRTC employees/ protest/ Chief Secretary P. Ravikumar/ 6th pay commission not possible
Key words: 6th pay commission- cannot be- enforced-Strict -action – strike-transport –worker-CS Ravikumar