ಬೆಂಗಳೂರು,ಏಪ್ರಿಲ್,10,2023(www.justkannada.in): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಬ್ಬರು ವಿದೇಶಿ ಡ್ರಗ್ ಫೆಡ್ಲರ್ ಗಳನ್ನ ಬಂಧಿಸಿರುವ ವಿವಿಪುರಂ ಠಾಣಾ ಪೊಲೀಸರು 7 ಕೋಟಿ ಮೌಲ್ಯದ ಮಾದಕವಸ್ತು ಜಪ್ತಿ ಮಾಡಿದ್ದಾರೆ.
ನೈಜೀರಿಯಾ ಮೂಲದ ಲಾರೆನ್ಸ್ ಹಾಗೂ ಚುಕ್ವೂನೇಜಿಮ್ ಬಂಧಿತ ಡ್ರಗ್ ಫೆಡ್ಲರ್ ಗಳು. ಬಂಧಿತರಿಂದ ಸುಮಾರು 7 ಕೋಟಿ ಮೌಲ್ಯದ ಡ್ರಗ್ಸ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 1.85 ಕೆ.ಜಿ ಬಿಳಿ ಮೀಥೈಲ್ ಎಡಿಯಾಕ್ಸಿ ಮೆಥಾಂಫೆಟಮೈನ್ , 1.15kg ಕಂದು ಮೀಥೈಲ್ ಎಡಿಯಾಕ್ಸಿ ಮೆಥಾಂಫೆಟಮೈನ್, 310 ಗ್ರಾಂ ಕೊಕೇನ್ ಅನ್ನು ಜಫ್ತಿ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಸಾಫ್ಟ್ವೇರ್ ಇಂಜನಿಯರ್ ಗಳನ್ನ ಟಾರ್ಗೆಟ್ ಮಾಡುತ್ತಿದ್ದ ವಿದೇಶಿ ಡ್ರಗ್ ಫೆಡ್ಲರ್ ಗಳು, ದೊಡ್ಡ ದೊಡ್ಡ ಉದ್ಯಮಿಗಳಿಗೂ ಡ್ರಗ್ಸ್ ಮಾರಾಟ ಮಾಡುತ್ತಿದ್ದರು. ನಗರದಲ್ಲಿ ಸುಮಾರು ಐದು ವರ್ಷಗಳಿಂದ ಮಾರಾಟ ಮಾಡುತ್ತಿದ್ದ ಫೆಡ್ಲರ್ಸ್ ಗಳು ಇದುವರೆಗೂ ನಗರದಲ್ಲಿ ಕೋಟ್ಯಾಂತರ ರೂಪಾಯಿ ಡ್ರಗ್ಸ್ ಮಾರಾಟ ಮಾಡಿದ್ದಾರೆ. ಸದ್ಯ ಇಬ್ಬರು ಫೆಡ್ಲರ್ಗಳ ಮೊಬೈಲ್ನ್ನು ವಶಕ್ಕೆ ಪಡೆದಿದ್ದು ಈ ಕುರಿತು ವಿವಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Key words: 7 crore -worth – drugs- seized-Arrest -two foreign -drug peddlers.