ನವದೆಹಲಿ, ಫೆಬ್ರವರಿ 05, 2019 (www.justkannada.in): ಶಾರುಖ್ ಖಾನ್ ಒಡೆತನದ ಕೋಲ್ಕತಾ ನೈಟ್ ರೈಡರ್ಸ್ ಮತ್ತು ರೋಸ್ ವ್ಯಾಲಿ ಗ್ರೂಪ್ ಗೆ ಸೇರಿದ 70.11 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ( ಇಡಿ ) ವಶಕ್ಕೆ ಪಡೆದುಕೊಂಡಿದೆ.
ರೋಸ್ ವ್ಯಾಲಿ ವಂಚನೆ ಹಗರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಪುರ್ಬಾ ಮೆದಿನಿಪುರ್ ಜಿಲ್ಲೆಯ ರಾಮನಗರ ಮತ್ತು ಮಹಿಶದಲ್ ನಲ್ಲಿ 24 ಎಕೆರೆ ಜಮೀನು ವಶಕ್ಕೆ ಪಡೆಯಲಾಗಿದೆ .
ಮುಂಬೈನಲ್ಲಿ ದಿಲ್ಕಾಪ್ ಛೇಂಬರ್ಸ್ , ಕೋಲ್ಕತಾದ ಜ್ಯೋತಿ ಬಸು ನಗರದಲ್ಲಿನ 1 ಎಕರೆ ಭೂಮಿ , ಐಶಾರಾಮಿ ಹೋಟೆಲ್ ಹಾಗೂ ಇವುಗಳಿಗೆ ಸಂಬಂಧಿಸಿದ 16.20 ಕೋಟಿ ರೂಪಾಯಿ ಬ್ಯಾಂಕ್ ಅಕೌಂಟ್ ಅನ್ನು 2002 ಮನಿ ಲ್ಯಾಂಡರಿಂಗ್ ತಡೆ ಕಾಯ್ದೆಯಡಿ ( ಪಿಎಂಎಲ್ ಎ ) ವಶಕ್ಕೆ ಪಡೆಯಲಾಗಿದೆ .
ಅಲ್ಲದೇ ಈ ಹಗರಣದಲ್ಲಿ ಶಾರುಖ್ ಒಡೆತನದ ಐಪಿಎಲ್ ಕ್ರಿಕೆಟ್ ಟೀಂ ನೈಟ್ ರೈಡರ್ಸ್’ಗೆ ಸಂಬಂಧಿಸಿದ ಒಂದು ಆಸ್ತಿಯನ್ನ ಇಡಿ ವಶಕ್ಕೆ ಪಡೆದಿದೆ.