ಕೊಲಂಬೋ:ಆ-17:(www.justkannada.in) 70 ವರ್ಷ ವಯಸ್ಸಾದ, ಅನಾರೋಗ್ಯದಿಂದ ಬಳಲಿ ಬೆಂಡಾಗಿರುವ ಬರಿ ಎಲುಬು-ಚರ್ಮದಿಂದ ಕೂಡಿದ ಅಸ್ಥಿಪಂಜರದಂತೆ ಕಾಣುವ ಆನೆಯ ಸ್ಥಿತಿ ಈಗ ವಿಶ್ವಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ತುಂಬಾ ಕೃಶವಾಗಿರುವ ಈ ಆನೆಯನ್ನು ಉತ್ಸವಕ್ಕೆ ಬಳಸಿಕೊಳ್ಳಲಾಗುತ್ತಿದ್ದು, ಸೂಕ್ತವಾದ ಚಿಕಿತ್ಸೆ ನೀಡದೇ ದುಡಿಸಿಕೊಳ್ಳುತ್ತಿರುವ ಈ ಆನೆಯ ಕಥೆ ಕೇಳಿದರೆ ನಿಜಕ್ಕೂ ಕಣ್ಣೀರು ಬರುತ್ತೆ.
ತಿಕರಿ ಎಂಬ 70 ವರ್ಷ ವಯಸ್ಸಿನ ಹೆಣ್ಣು ಆನೆಯ ಕಥೆಯಿದು. ಅನಾರೋಗ್ಯದಿಂದ ಅಸ್ಥಿಪಂಜರ ಕಾಣುವಷ್ಟು ಬಡಕಲಾಗಿದ್ದ ಆನೆಯ ಮೇಲೆ ವರ್ಣರಂಜಿತ ಬಟ್ಟೆಗಳನ್ನು ಹೊದಿಸಿ ಬೌದ್ಧ ಧರ್ಮದ ಹಬ್ಬದ ಮೆರವಣಿಗೆಯಲ್ಲಿ ಬಳಸಿಕೊಳ್ಳಲಾಗುತ್ತಿತ್ತು. ಈ ಆನೆಯ ಬಗ್ಗೆ ಈವರೆಗೆ ಯಾರಿಗೂ ಅಷ್ಟಾಗಿ ಗೊತ್ತಿಲ್ಲ. ಆದರೆ ಸೇವ್ ಎಲಿಫಂಟ್ ಫೌಂಡೇಶನ್ ಎಂಬ ಫೇಸ್ಬುಕ್ ಖಾತೆಯಲ್ಲಿ ಈ ಆನೆಯ ಸಂಕಷ್ಟವನ್ನು ಬರೆಯಲಾಗಿದ್ದು, ಈ ಮೂಲಕ ವಿಶ್ಜಯ ಬೆಳಕಿಗೆ ಬಂದಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ಧ ಆನೆಯನ್ನು ಮಾನವೀಯತೆಯನ್ನೂ ಮರೆತು ದುಡಿಸಿಕೊಳ್ಲುತ್ತಿರುವುದರ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನಲೆಯಲ್ಲಿ ಶ್ರೀಲಂಕಾ ಸರ್ಕಾರ ಈಗ ತನಿಖೆಗೆ ಆದೇಶಿಸಿದೆ.
ಪ್ರತಿ ವರ್ಷ ಶ್ರೀಲಂಕಾದಲ್ಲಿ ನಡೆಯುವ ಪೆರೆಹಾರ ಉತ್ಸವದಲ್ಲಿ ಪಾಲ್ಗೊಳ್ಳುವ 60 ಆನೆಗಳಲ್ಲಿ ತಿಕರಿ ಎಂಬ ವೃದ್ಧ ಆನೆಯೂ ಒಂದು. ಮೆರವಣಿಗೆಯಲ್ಲಿ ಭಾಗಿಯಾಗಲು 10 ದಿನಗಳ ಕಾಲ ನಡೆಯುವ ಉತ್ಸವದಲ್ಲಿ ಪ್ರತಿ ದಿನ ಸಂಜೆ ಆಗಮಿಸುವ ಆನೆಗಳು ತಡರಾತ್ರಿಯವರೆಗೂ ಮೆರವಣಿಗೆಯಲ್ಲಿ ಹೆಜ್ಜೆ ಹಾಕುತ್ತವೆ. ಪಟಾಕಿ, ವಾದ್ಯಗಳು, ಸದ್ದು-ಗದ್ದಲಗಳ ಜತೆಗೆ ಆನೆಗಳೂ ಕಿಲೊಮೀಟರ್ಗಟ್ಟಲೇ ಕ್ರಮಿಸುತ್ತವೆ. ಇವುಗಳ ಮಧ್ಯೆ ಅನರೋಗ್ಯದ ನಡುವೆಯೂ ಕಷ್ಟಪಟ್ಟು ಭಾಗವಹಿಸುವ ತಿಕರಿ ಆನೆಯ ವೇದನೆಯ ಕಣ್ಣೀರನ್ನು ಅಲ್ಲಿ ಸಂಭ್ರಮದಲ್ಲಿ ತೊಡಗಿದ್ದ ಯಾವೊಬ್ಬನು ನೂಡುವುದೂ ಇಲ್ಲ. ಮುಖಕ್ಕೆ ಬೀಲುತ್ತಿದ್ದ ಲೈಟಿನ ಬೆಳಕನ್ನು ತಡೆಯಲಾಕದೇ ಆನೆಯ ಕಣ್ಣಂಚಿನಲ್ಲಿ ಬರುತ್ತಿದ್ದ ನೋವಿನ ಹನಿ ಯಾರಿಗೂ ಕಾಣುವುದೂ ಇಲ್ಲ. ಕಷ್ಟಪಟ್ಟು ಇಡುತ್ತಿದ್ದ ಅದರ ಹೆಜ್ಜೆಯನ್ನು ಯಾರು ಗಮನಿಸಲಿಲ್ಲ. ಇನ್ನೊಬ್ಬರಿಗೆ ತೊಂದರೆ ನೀಡಬಾರದು ಎಂಬ ಬುದ್ಧನ ಮಾತಿನಲ್ಲಿ ನಂಬಿಕೆ ಇಟ್ಟಿರುವ ನಾವು ಮೂಕಪ್ರಾಣಿಯ ರೋಧನೆಯನ್ನು ಗಮನಿಸುತ್ತಲೇ ಇಲ್ಲ ಎಂದು ಸೇವ್ ಎಲಿಫಂಟ್ ಫೌಂಡೇಶನ್ ಫೇಸ್ಬುಕ್ ಖಾತೆಯಲ್ಲಿ ಬರೆದಿದೆ. ಅಲ್ಲದೇ ತಿಕರಿ ಆನೆಯ ಫೋಟೋಗಳನ್ನು ಕೂಡ ಶೇರ್ ಮಾಡಿದೆ.
ಬೃಹದಾಕಾರದ ಆನೆಯೊಂದು ಅಸ್ಥಿಪಂಜರದಂತಾಗಿ ನಿಂತಿರುವ ಫೋಟೊವನ್ನು ಕಂಡ ನೆಟ್ಟಿಗರು, ಪ್ರಾಣಿಪ್ರಿಯರು ಶಾಕ್ ಆಗಿದ್ದಾರೆ. ಅಲ್ಲದೇ ತಮ್ಮ ಆಕ್ರೋಶದ ಮಾತುಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಕೂಡಲೇ ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಶ್ರೀಲಂಕಾದ ಪ್ರವಾಸೋದ್ಯಮ ಹಾಗೂ ಅರಣ್ಯ ಸಚಿವ ಜಾನ್ ಅಮರತುಂಗಾಗೆ ಮನವಿ ಮಾಡಿದ್ದಾರೆ.
ದೂರುಗಳು ಹೆಚ್ಚುತ್ತಿರುವ ಬೆನ್ನಲ್ಲೇ ಎಚ್ಚೆತ್ತ ಸಚಿವರು ತಿಕಿರಿ ಆನೆಯನ್ನು ಮೆರವಣಿಗೆ ತಂದ ಬಗ್ಗೆ ಸಂಪೂರ್ಣ ವಿವರ ಕೊಡುವಂತೆ ಅಧಿಕಾರಿಗಳಿಗೆ ತಿಳಿಸಿ, ಮೆರವಣಿಗೆಯಲ್ಲಿ ವೃದ್ಧ ಆನೆಯನ್ನು ಬಳಸದಂತೆ ಸೂಚನೆ ನೀಡಿದ್ದಾರೆ. ದುರಾದೃಷ್ಟವಶಾತ್ 70 ವರ್ಷದ ತಿಕಿರಿ ಆನೆ ಮೆರವಣಿಗೆ ವೇಳೆ ಅನಾರೋಗ್ಯದಿಂದ ಕುಸಿದು ಬಿದ್ದಿದ್ದು, ಸಾವು- ಬದುಕಿನ ನಡುವೆ ಹೋರಾಟ ನಡೆಸುತ್ತಿದೆ.