ಬೆಂಗಳೂರು,ಜ,24,2020(www.justkannada.in): ಜನವರಿ 26 ರಂದು 71ನೇ ಗಣರಾಜ್ಯೋತ್ಸವ ಹಿನ್ನೆಲೆ ಬೆಂಗಳೂರಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗುತ್ತಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದರು.
ಇಂದು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, 71ನೇ ಗಣರಾಜ್ಯೋತ್ಸವ ಹಿನ್ನೆಲೆ ಮಾಣಿಕ್ ಷಾ ಪರೇಡ್ ಮೈದಾನದ ಸುತ್ತ 85 ಸಿಸಿ ಕ್ಯಾಮರಾಗಳನ್ನ ಅಳವಡಿಸಲಾಗಿದೆ. ಭದ್ರತೆಗಾಗಿ 10 ಕೆಎಸ್ ಆರ್ ಪಿ ತುಕಡಿಗಳನ್ನ ನಿಯೋಜಿಸಲಾಗಿದೆ. ಎರಡು ಶ್ವಾನದಳ, ಕ್ಷಿಪ್ರಪಡೆ, ಗರುಡ ಪಡೆಯನ್ನ ನಿಯೋಜಿಸಲಾಗಿದೆ ಹಾಗೆಯೇ9 ಡಿಸಿಪಿಗಳ ನೇತೃತ್ವದಲ್ಲಿ ಬಂದೋಬಸ್ತ್ ಮಾಡಲಾಗುವುದು ಎಂದು ತಿಳಿಸಿದರು.
ಹಾಗೆಯೇ ಮೈದಾನಕ್ಕೆ ಬರುವವರಿಗೆ ಸಿಗರೇಟ್, ಬೆಂಕಿಪೊಟ್ಟಣ, ಮಾರಕಾಸ್ತ್ರ, ಚಾಕು, ನೀರಿನ ಬಾಟಲ್ ಪಟಾಕಿ, ಸ್ಪೋಟಕ ವಸ್ತುಗಳು, ಕರಪತ್ರ, ಹರಿತವಾದ ವಸ್ತುಗಳು, ಸ್ಟಿಲ್ ಕ್ಯಾಮರಾ, ಕ್ಯಾನ್ ಸೇರಿ ಹಲವು ವಸ್ತುಗಳನ್ನ ನಿಷೇಧಿಸಲಾಗಿದೆ ಎಂದು ಭಾಸ್ಕರ್ ರಾವ್ ತಿಳಿಸಿದರು.
ಜ.26ರಂದು ರೆಡ್ ಅಲರ್ಟ್ ಘೋಷಣೆ ಮಾಡಲಾಗಿದ್ದು ಯಾವುದೇ ಪ್ರತಿಭಟನೆ ಧರಣಿ ನಡೆಸುವಂತಿಲ್ಲ ಎಂದು ಭಾಸ್ಕರ್ ರಾವ್ ತಿಳಿಸಿದರು.
Key words: 71st Republic Day –bangalore- City Police Commissioner -Bhaskar Rao -informed –police- tight security -Manik Shah Parade ground.