ನವದೆಹಲಿ,ಜನವರಿ,26,2021(www.justkannada.in): ದೇಶಾದ್ಯಂತ 72ನೇ ಗಣರಾಜ್ಯೋತ್ಸವ ಸಂಭ್ರಮ ಕಳೆಗಟ್ಟಿದ್ದು, ಈ ಮಧ್ಯೆ ದೆಹಲಿಯ ರಾಜಪಥ್ ನಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಧ್ವಜಾರೋಹಣ ನೆರವೇರಿಸಿದರು.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಧ್ವಜಾರೋಹಣ ನೆರವೇರಿಸಿದ ಬಳಿಕ ರಾಜ್ಪಥ್ನಲ್ಲಿ ಪರೇಡ್ ಆರಂಭವಾಗಿದೆ. ಈ ಮೂಲಕ ಭಾರತೀಯ ಸೇನಾಶಕ್ತಿ ಅನಾವರಗೊಂಡಿದೆ. ಈ ವೇಳೆ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು, ಪ್ರಧಾನಮಂತ್ರಿ ನರೇಂದ್ರ ಮೋದಿ, ರಕ್ಷಣಾ ಪಡೆಗಳ ಮುಖ್ಯಸ್ಥರು ಸೇರಿದಂತೆ ಸಿಡಿಎಸ್ ರಾವತ್ ಪಾಲ್ಗೊಂಡಿದ್ದಾರೆ.
ಪರಮವೀರ ಚಕ್ರ ಮತ್ತು ಅಶೋಕ ಚಕ್ರ ಪುರಸ್ಕೃತರಿಂದ ಪರೇಡ್ ನಡೆಯುತ್ತಿದೆ. ಇದೇ ಮೊದಲ ಬಾರಿಗೆ ಬಾಂಗ್ಲಾದೇಶದ ಸೇನೆಯು ಗಣರಾಜ್ಯೋತ್ಸವ ಪರೇಡ್ನಲ್ಲಿ ಭಾಗವಹಿಸಿದೆ. ವಿವಿಧ ರಾಜ್ಯಗಳ ಸ್ತಬ್ದಚಿತ್ರಗಳು ಸಹ ಪ್ರದರ್ಶನಗೊಳ್ಳುತ್ತಿದ್ದು ನೋಡುಗರ ಕಣ್ಮನ ಸೆಳೆಯುತ್ತಿವೆ.
72nd Republic Day: President Ramanth Kovind hoists tricolor
New Delhi, Jan. 26, 2021 (www.justkannada.in): President Sri Ramnath Kovind hoisted the National Flag at Rajpath in New Delhi on the occasion of the 72nd Republic Day today.
The Republic Day celebrations are still on at Rajpath. The parade is going on after the flag hoist, bringing to the fore the strength of the Indian Army. Vice-President Sri Venkaiah Naidu, Prime Minister Narendra Modi, Heads of various Defence forces, CDS Rawat, and others are witnessing the parade.
The Bangladesh Army is taking part in the Republic Day parade for the first time. Colourful tableaus representing various states are one of the attractions.
Keywords: Republic Day at New Delhi/ Flag Hoist by President/ Ramnath Kovind
Key words: 72nd Republic Day-President- Ramanath Kovind-India’s- Military Power.