ಮೈಸೂರು,ಜ,6,2020(www.justkannada.in): ಮೊಬೈಲ್ ಆಪ್ ಮೂಲಕ ಆರ್ಥಿಕ ಗಣತಿ ಮಾಡಲಾಗುತ್ತಿದ್ದು ಸಾರ್ವಜನಿಕರು ಗಣತಿದಾರರಿಗೆ ಸ್ಪಷ್ಟವಾದ ಮಾಹಿತಿ ನೀಡಬೇಕು ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜೀ ಶಂಕರ್ ಮನವಿ ಮಾಡಿದರು.
ಆ್ಯಪ್ ಮೂಲಕ ಮಾಹಿತಿ ಸಂಗ್ರಹಿಸುವ 7ನೇ ಆರ್ಥಿಕ ಗಣತಿಯ ಮೊಬೈಲ್ ಆಪ್ ಅನ್ನ ಮೈಸೂರಿನ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಮೈಸೂರಿನ ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಮಾಡಿದರು. ಇದೇ ಮೊದಲ ಬಾರಿಗೆ ಡಿಜಿಟಲ್ ಇಂಡಿಯಾ ಕಾರ್ಯಕ್ರಮದಡಿ ಮೊಬೈಲ್ ಆಪ್ಮೂಲಕ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ.
ನಾಳೆಯಿಂದ ಜಿಲ್ಲಾದಾದ್ಯಂತ ಮಾಹಿತಿ ಸಂಗ್ರಹ ಕಾರ್ಯ ಪ್ರಾರಂಭವಾಗಲಿದ್ದು, ಉದ್ಯಮ ಸ್ಥಳಗಳಿಗೆ ಮನೆಗಳಿಗೆ ತೆರಳಿ ಸಿಬ್ಬಂದಿಗಳು ಮಾಹಿತಿ ಸಂಗ್ರಹಿಸಲಿದ್ದಾರೆ. ಅಧಿಕೃತ ಮತ್ತು ಅನಧಿಕೃತ ಎಲ್ಲಾ ಉದ್ಯಮಗಳ ಮಾಹಿತಿ ಸಂಗ್ರಹಿಸಲಾಗುತ್ತಿದೆ.
ಈ ಬಗ್ಗೆ ಮಾಹಿತಿ ನೀಡಿದ ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜೀ ಶಂಕರ್, ಪ್ರತಿ ತಾಲ್ಲೂಕು ಮತ್ತು ಪಂಚಾಯತಿವಾರು ಆರ್ಥಿಕ ಗಣತಿಗೆ ಸಿಬ್ಬಂದಿ ನೇಮಕ ಮಾಡಲಾಗಿದ್ದು . ಪ್ರತಿ ಐದು ವರ್ಷಕ್ಕೆ ಒಮ್ಮೆ ಈ ಗಣತಿ ನಡೆಯುತ್ತಿದೆ. ಗಣತಿ ಕಾರ್ಯವು ಜನವರಿ 2020 ರಿಂದ ಮಾರ್ಚ್ 2020 ರವರೆಗೆ ನಡೆಯಲಿದ್ದು, ಮೊಬೈಲ್ ಆಪ್ ಮೂಲಕ ಮಾಹಿತಿ ಸಂಗ್ರಹ ಮಾಡುಲಾಗುತ್ತಿದೆ. ಖಾಸಗಿ ಸಂಸ್ಥೆ ಮುಲಕ ಮಾಹಿತಿ ಸಗ್ರಹ ಮಾಡಲಾಗುತ್ತಿದೆ. ಈ ಬಗ್ಗೆ ಗಣತಿದಾರರಿಗೆ ಸೂಕ್ತ ತರಬೇತಿ ನೀಡಲಾಗಿದೆ. ಎಲ್ಲಾ ಉದ್ಯಮದಾರರು ಗಣತಿದಾರರಿಗೆ ಸರಿಯಾದ ಮಾಹಿತಿ ನೀಡಿ ಎಂದು ಸೂಚಿಸಿದರು.
ಕೃಷಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾರ್ವಜನಿಕ ಇಲಾಖೆಯ ಆಡಳಿತ ಕಚೇರಿಗಳು, ರಕ್ಷಣಾ ಮಂತ್ರಾಲಯ, ಸ್ಥಳಿಯ ಸಂಸ್ಥೆಗಳ ಆಡಳಿತ ಕಚೇರಿಗಳು ಈ ಗಣತಿಗೆ ಒಳಪಡುವುದಿಲ್ಲ. ಇದು ಕೇವಲ ಆರ್ಥಿಕ ಗಣತಿ ಮಾತ್ರ ಅಷ್ಟೆ. ಜಿಎಸ್ ಟಿ, ಆದಾಯ ತೆರಿಗೆ ಅಥವಾ ಇತರೆ ಯಾವುದೆ ಅನ್ಯ ಉದ್ದೇಶಗಳು ಇದರಲ್ಲಿ ಇಲ್ಲ. ಸ್ಥಳಿಯ ಸಂಸ್ಥೆಗಳ ಸಹಕಾರ ದೊಂದಿಗೆ ಗಣತಿ ನಡೆಯಲಿದ್ದು, ಆದ್ದರಿಂದ ಎಲ್ಲರು ಗಣತಿದಾರರಿಗೆ ಸ್ಪಷ್ಟವಾದ ಮಾಹಿತಿ ನೀಡಿ ಎಂದು ಡಿಸಿ ಅಭಿರಾಂ ಜೀ ಶಂಕರ್ ಸಾರ್ವಜನಿಕರಿಗೆ ಮನವಿ ಮಾಡಿದರು.
Key words: 7th Economic – Mobile App- Launched-mysore- DC Abhiram Jee Shankar