ಹರ್ಷ ಕೊಲೆ ಪ್ರಕರಣದಲ್ಲಿ ಈವರೆಗೆ 8 ಮಂದಿ ಬಂಧನ- ಗೃಹ ಸಚಿವ ಅರಗ ಜ್ಞಾನೇಂದ್ರ ಮಾಹಿತಿ.

ಬೆಂಗಳೂರು,ಫೆಬ್ರವರಿ,23,2022(www.justkannada.in):  ಭಜರಂಗದಳದ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ 8 ಮಂದಿಯನ್ನ ಬಂಧಿಸಲಾಗಿದ್ದು ವಿಚಾರಣೆ ನಡೆಯುತ್ತಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳೀಸಿದ್ದಾರೆ.

ಈ ಕುರಿತು ಸುದ್ಧಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಗೃಹ ಸಚಿವ ಅರಗ ಜ್ಞಾನೇಂದ್ರ,  ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ 8 ಜನರ ಬಂಧನ ಅಧಿಕೃತವಾಗಿ ಆಗಿದೆ. ಇನ್ನು ಕೆಲವರನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.

ಶಿವಮೊಗ್ಗ ನಗರದಲ್ಲಿ ಶುಕ್ರವಾರದವರೆಗೆ 144 ಸೆಕ್ಷನ್ ನಿಷೇಧಾಜ್ಞೆ ಮುಂದುವರಿಸುತ್ತೇವೆ. ಅಲ್ಲಿನ ಜಿಲ್ಲಾಧಿಕಾರಿಗಳು ಪರಿಸ್ಥಿತಿ ನೋಡಿಕೊಂಡು ನಿರ್ಣಯ ತೆಗೆದುಕೊಳ್ಳುತ್ತಾರೆ. ತನಿಖೆ ನಡೆಯುತ್ತಿದೆ. ಯಾವ ವಿಚಾರವನ್ನ ಲಘುವಾಗಿ ಪರಿಗಣಿಸಲ್ಲ ಎಂದರು.

ಶಿವಮೊಗ್ಗ ನಗರದಲ್ಲಿ ಸಮಾಜ ವಿರೋಧಿ ಶಕ್ತಿಗಳು ಬೆಳೆಯಲು ಕಾರಣವೇನೆಂದು ಪೊಲೀಸ್ ಇಲಾಖೆ ಎಷ್ಟರ ಮಟ್ಟಿಗೆ ಜವಾಬ್ದಾರಿಯಿದೆ ಎಂದು ತಿಳಿಯಲು ರಾಜ್ಯ ಡಿಜಿಗಳಿಗೆ ಪತ್ರ ಬರೆದಿದ್ದೇವೆ, ಶಿವಮೊಗ್ಗದ ದೊಡ್ಡಪೇಟೆ ಮತ್ತು ಕೋಟೆ ಎರಡು ಪೊಲೀಸ್ ಸ್ಟೇಷನ್ ಗಳಲ್ಲಿ ಕಳೆದ 5ದಿಂದ ಕೆಲಸ ಮಾಡುತ್ತಿರುವ ಸಿಬ್ಬಂದಿ ಬಗ್ಗೆ ,  ಏನೇನು ಕೇಸುಗಳು ಬಂದಿದ್ದವು, ಅವರು ಕೇಸಿನ ಮೇಲೆ, ಆರೋಪಿಗಳ ಮೇಲೆ ಎಷ್ಟು ನಿಗಾ ಇಟ್ಟಿದ್ದರು, ಯಾವ ರೀತಿ ಕ್ರಮ ವಹಿಸಿದ್ದರು ಎಂದು ತಿಳಿದುಕೊಳ್ಳಲು ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.

Key words: 8 arrested – Harsha -murder –case-Arga Jnanendra

ENGLISH SUMMARY…

Eight persons held with respect to Harsha’s murder in Shivamogga: Home Minister Araga Jnanendra
Bengaluru, February 23,2022 (www.justkannada.in): “With respect to the murder of Bajrang Dal activist Harsha in Shivmogga, the police have held eight persons and are investigating,” said Home Minister Araga Jnanendra.
Addressing a press meet today, the Home Minister said, “Eight persons have been held in this case till now. A few more persons are being inquired. Prohibitory orders have been imposed in Shivamogga till Friday. The Deputy Commissioner will make a decision depending upon the situation. The investigation is on. We have not considered anything lightly,” he added.
Keywords: Home Minister Araga Jnanendra/ investigation/ murder/ Harsha/ Shivmogga