ಮೈಸೂರು,ಜನವರಿ,18,2022(www.justkannada.in): ಮೇಕೆದಾಟು ಯೋಜನೆಯಿಂದ ಎಂಟರಿಂದ ಹತ್ತು ಜಿಲ್ಲೆಗಳಿಗೆ ಅನುಕೂಲವಾಗಲಿದೆ ಎಂದು ದಿ ಇನ್ಸ್ಟಿಟ್ಯೂಟ್ ಆಪ್ ಇಂಜಿನಿಯರ್ ಇಂಡಿಯಾದ ಅಧ್ಯಕ್ಷ ಲಕ್ಷ್ಮಣ್ ಮಾಹಿತಿ ನೀಡಿದರು.
ದಿ ಇನ್ಸ್ಟಿಟ್ಯೂಟ್ ಆಪ್ ಇಂಜಿಯರ್ ಇಂಡಿಯಾದ ಅಧ್ಯಕ್ಷ ಲಕ್ಷ್ಮಣ್ ನೇತೃತ್ವದಲ್ಲಿ ನಗರದ ರೋಟರಿ ಸಭಾಂಗಣದಲ್ಲಿ ಸಭೆ ನಡೆಯಿತು. ಮೇಕೆದಾಟು ಜಲಾಶಯ ನಿರ್ಮಾಣ, ಮೈಸೂರು ಭಾಗಕ್ಕೆ ಎಷ್ಟು ಅನುಕೂಲಕರ ಎಂಬ ವಿಚಾರ ಕುರಿತು ಚರ್ಚೆ ನಡೆಸಲಾಯಿತು. ಸಭೆಯಲ್ಲಿ ಇಂಜಿನಿಯರ್ ಗಳು ಹಾಗೂ ರೈತ ಮುಖಂಡರು ಸಭೆಯಲ್ಲಿ ಭಾಗಿಯಾಗಿದ್ದರು.
ಯೋಜನೆ ಅನುಕೂಲತೆ ಕುರಿತು, ಜಲಾಶಯದ ಸಂಪೂರ್ಣ ವಿವರವನ್ನ ಲಕ್ಷ್ಮಣ್ ಪ್ರಸ್ತುತ ಪಡಿಸಿದರು. ಈ ಯೋಜನೆ ವಾಸ್ತವತೆಯನ್ನು ಜನಸಾಮಾನ್ಯರಿಗೆ ತಿಳಿಸುವ ಒಂದು ಪ್ರಯತ್ನ ಇದು. ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ಈ ಯೋಜನೆಯಿಂದ ಎಂಟರಿಂದ ಹತ್ತು ಜಿಲ್ಲೆಗಳಿಗೆ ಅನುಕೂಲ ಆಗಲಿದೆ. 1924 ರಲ್ಲಿ ಅಂದಿನ ಮದ್ರಾಸ್ ಪ್ರಾಂತ್ಯದ ಸರ್ಕಾರ ತೀರ್ಮಾನ ಮಾಡಿತ್ತು. 2013 ರಲ್ಲಿ ಮತ್ತೆ ಈ ಯೋಜನೆಗೆ ಡಿಪಿಆರ್ ತಯಾರು ಮಾಡಲಾಗಿತ್ತು. ಈಗ ಮತ್ತೆ ಈ ಜಲಾಶಯ ನಿರ್ಮಾಣ ಮಾಡಬೇಕಿದೆ.
ಮೇಕೆದಾಟು ಯೋಜನೆಯಿಂದ ನಮ್ಮನೀರನ್ನು ಶೇಖರಣೆ ಮಾಡುಲು ನಿರ್ಮಾಣ ಮಾಡಲಾಗುತ್ತೆ. ಡಿಪಿಆರ್ ಪ್ರಕಾರ ಬೆಂಗಳೂರಿಗೆ ಕುಡಿಯುವ ನೀರಿಗೆ ಬಳಕೆ ಮಾಡಲಾಗುತ್ತದೆ. 4.75 ಟಿಎಂಸಿ ನೀರನ್ನು ಬೆಂಗಳೂರಿಗರ ಕುಡಿಯಲು ಬಳಕೆ ಮಾಡಬಹುದಾಗಿದೆ. ಉಳಿದದ್ದನ್ನು ವಿದ್ಯುಚ್ಛಕ್ತಿ ಉತ್ಪಾದನೆಗೆ ಬಳಕೆ ಮಾಡಲಾಗುತ್ತದೆ. ಇದನ್ನ ವ್ಯವಸಾಯಕ್ಕೆ ಬಳಕೆ ಮಾಡಲು ಸಾಧ್ಯವಿಲ್ಲ ಎಂದು ಲಕ್ಷ್ಮಣ್ ತಿಳಿಸಿದರು.
Key words: 8 to 10-districts- benefit – Meekadattu project.