ಬೆಂಗಳೂರು,ಜು,30,2019(www.justkannada.in): ನಿಗೂಢವಾಗಿ ನಾಪತ್ತೆಯಾಗಿರುವ ಮಾಜಿ ಸಿಎಂ ಎಸ್.ಎಂ ಕೃಷ್ಣ ಅವರ ಅಳಿಯ ಕೆಫೆ ಕಾಫಿಡೇ ಸಂಸ್ಥಾಪಕ ಸಿದ್ಧಾರ್ಥ್ ಅವರು ಸುಮಾರು 8ಸಾವಿರ ಕೋಟಿ ರೂ ಸಾಲ ಮಾಡಿಕೊಂಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಉದ್ಯಮಿ ಸಿದ್ಧಾರ್ಥ್ ಅವರು ನಿನ್ನೆ ಸಂಜೆ ಮಂಗಳೂರು- ಉಳ್ಳಾಲ ರಸ್ತೆಯ ಬಳಿ ತಮ್ಮ ಕಾರು ಚಾಲಕನಿಗೆ ಕಾರು ನಿಲ್ಲಿಸಲು ಹೇಳಿ ನಂತರ ಅಲ್ಲಿಂದ ನಾಪತ್ತೆಯಾಗಿದ್ದಾರೆ. ಆದರೆ ಅವರ ಬಗ್ಗೆ ಇನ್ನು ಯಾವುದೇ ಸುಳಿವು ಸಿಕ್ಕಿಲ್ಲ. ಸಿದ್ಧಾರ್ಥ್ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿರಬಹುದೆಂಬ ಶಂಕೆ ವ್ಯಕ್ತವಾಗಿದ್ದು, ಈ ಹಿನ್ನೆಲೆ ನದಿಯಲ್ಲಿ ಶೋಧಕಾರ್ಯ ಮುಂದುವರೆದಿದೆ.
ಇನ್ನು ಉದ್ಯಮಿ ಸಿದ್ಧಾರ್ಥ್ ಫೈನಾನ್ಸ್ ಸೇರಿದಂತೆ ವಿವಿಧ ಕಡೆಗಳಲ್ಲಿ ಸಾಲ ಮಾಡಿಕೊಂಡಿದ್ದರು. ಹೀಗಾಗಿ ಅವರಿಗೆ ಸಾಲ ತೀರಿಸುವಂತೆ ಸಾಕಷ್ಟು ಒತ್ತಡವಿತ್ತು ಎಂಬುದು ಅವರು ಇತ್ತೀಚೆಗೆ ಕಳಿಸಿದ ಇಮೇಲ್ ಗಳಿಂದ ತಿಳಿದು ಬಂದಿದೆ. ಸಿದ್ಧಾರ್ಥ್ ಅವರು ಒಟ್ಟು 8,082.63 ಕೋಟಿ ರೂ. ಸಾಲದ ಸುಳಿಯಲ್ಲಿ ಸಿಲುಕಿದ್ದರು ಎನ್ನಲಾಗಿದ್ದು ಅದರಲ್ಲಿ, ಐಡಿಬಿಐ ಟ್ರಸ್ಟ್ ಶಿಪ್ ಸರ್ವಿಸಸ್ ಲಿಮಿಟೆಡ್ ನಿಂದ 4,475 ಕೋಟಿ ರೂ, ಅಕ್ಸಿಸ್ ಟ್ರಸ್ಟೀ ಸರ್ವಿಸಸ್ ಲಿಮಿಟೆಡ್ ನಿಂದ 915 ಕೋಟಿ ರೂ, ಆರ್ ಬಿ ಎಲ್ ಬ್ಯಾಂಕ್ ಲಿಮಿಟೆಡ್ ನಿಂದ 174 ಕೋಟಿ ರೂ, ಸ್ಟಾಂಡರ್ಡ್ ಚಾರ್ಟರ್ಡ್ ಲೋನ್ಸ್ ಅಂಡ್ ಇನ್ವೆಸ್ಟ್ ಮೆಂಟ್ಸ್(ಇಂಡಿಯಾ) ಲಿಮಿಟೆಡ್ ನಿಂದ 150 ಕೋಟಿ ರೂ ಸಾಲ ಪಡೆದಿದ್ದರು.
ಸಾಲ ಪಡೆದ ವಿವರಗಳ ಪಟ್ಟಿ ಇಲ್ಲಿದೆ ನೋಡಿ…..
ಆದಿತ್ಯ ಬಿರ್ಲಾ ಫೈನಾನ್ಸ್ ಲಿಮಿಟೆಡ್- 278 ಕೋಟಿ ರೂ.
ಯೆಸ್ ಬ್ಯಾಂಕ್ ಲಿಮಿಟೆಡ್ 273.63 ಕೋಟಿ ರೂ.
ಅಕ್ಸಿಸ್ ಬ್ಯಾಂಕ್ ಲಿಮಿಟೆಡ್ -315 ಕೋಟಿ ರೂ.
ಅಕ್ಸಿಸ್ ಫೈನಾನ್ಸ್ ಲಿಮಿಟೆಡ್ 125 ಕೋಟಿ ರೂ.
ಕೋಟಾಕ್ ಮಹಿಂದ್ರಾ ಇನ್ವೆಸ್ಟ್ ಲಿಮಿಟೆಡ್ – 125 ಕೋಟಿ ರೂ.
ಎಸ್ ಟಿಸಿಐ ಫೈನಾನ್ಸ್ ಲಿಮಿಟೆಡ್ 100 ಕೋಟಿ ರೂ.
ಶಾಪೂರ್ಜಿ ಪಲ್ಲೊಂಜಿ ಫೈನಾನ್ಸ್ ಪ್ರೈವೇಟ್ ಲಿಮಿಟೆಡ್ 80 ಕೋಟಿ ರೂ.
ವಿಸ್ತಾರಾ ಐಟಿಸಿಎಲ್ (ಇಂಡಿಯಾ) ಲಿಮಿಟೆಡ್ 75 ಕೋಟಿ ರೂ.
ಕ್ಲಿಕ್ಸ್ ಕ್ಯಾಪಿಟಲ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ 150 ಕೋಟಿ ರೂ.
RABO ಇಂಡಿಯಾ ಫೈನಾನ್ಸ್ ಲಿಮಿಟೆಡ್ 80 ಕೋಟಿ ರೂ.
ಶ್ರೀರಾಮ್ ಸಿಟಿ ಯೂನಿಯನ್ ಫೈನಾನ್ಸ್ ಲಿಮಿಟೆಡ್ 50 ಕೋಟಿ ರೂ.
ರತನ್ ಇಂಡಿಯಾ ಫೈನಾನ್ಸ್ ಪ್ರೈವೇಟ್ ಲಿಮಿಟೆಡ್ 50 ಕೋಟಿ ರೂ.
ಕ್ಲಿಕ್ಸ್ ಫೈನಾನ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ 50 ಕೋಟಿ ರೂ.
ಎ.ಕೆ.ಕ್ಯಾಪಿಟಲ್ ಫೈನಾನ್ಸ್ ಪ್ರೈವೇಟ್ ಲಿಮಿಟೆಡ್ -121 ಕೋಟಿ ರೂ.
ಕೊಟಾಕ್ ಹೀಂದ್ರಾ ಪ್ರೈಮ್ ಲಿಮಿಟೆಡ್ 50 ಕೋಟಿ ರೂ.
ಐಎಫ್ ಸಿಐ ಲಿಮಿಟೆಡ್ 50 ಕೋಟಿ ರೂ.
ಬಜಾಜ್ ಫೈನಾನ್ಸ್ ಲಿಮಿಟೆಡ್ 45 ಕೋಟಿ ರೂ.
ಎಡೆಲ್ವೆಸ್ ಫೈನಾನ್ಸ್ ಅಂಡ್ ಇನ್ವೆಸ್ಟ್ ಮೆಂಟ್ಸ್ ಲಿಮಿಟೆಡ್ 25 ಕೋಟಿ ರೂ.
ಪಿರಾಮಳ್ ಟ್ರಸ್ಟ್ ಶಿಪ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ 175 ಕೋಟಿ ರೂ.
ಇಸಿಎಲ್ ಫೈನಾನ್ಸ್ ಲಿಮಿಟೆಡ್ – 150 ಕೋಟಿ ರೂ ಸಾಲ ಮಾಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
Key words: 8,000 crore -loan -cafe Coffee Day- founder- Siddharth