ಬೆಂಗಳೂರು, ಅಕ್ಟೋಬರ್ 12, 2019 (www.justkannada.in): ಮೇರಿಕೋಮ್ ದಾಖಲೆಯ 8ನೇ ಬಾರಿ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಈ ಮೂಲಕ ಇತಿಹಾಸ ಕಂಡ ಅತ್ಯಂತ ಯಶಸ್ವಿ ಬಾಕ್ಸರ್ ಎಂಬ ವಿಶ್ವದಾಖಲೆಗೆ ಪಾತ್ರರಾಗಿದ್ದಾರೆ. ರಷ್ಯಾದ ಉಲಾನ್ ಉಡೆಯಲ್ಲಿ ನಡೆದ ವನಿತೆಯರ 51 ಕೆಜಿ ವಿಭಾಗದ ಫೈನಲ್ ನಲ್ಲಿ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಕೊಲಂಬಿಯಾದ ವೆಲೆನಿಕಾ ವಿಕ್ಟೋರಿಯಾ ಅವರನ್ನು ಏಕಪಕ್ಷೀಯವಾಗಿ 5-0 ಅಂಕಗಳಿಂದ ಸೋಲಿಸಿದರು. ಈ ಮೂಲಕ ಒಲಿಂಪಿಕ್ಸ್ಗೆ ಅರ್ಹತೆ ಪಡೆದರು.
1974ರಲ್ಲಿ ಕ್ಯೂಬಾದ ಫೆಲಿಕ್ಸ್ ಸೆವೆನ್ ಪುರುಷರ ವಿಭಾಗದಲ್ಲಿ ಅತೀ ಹೆಚ್ಚು 7 ಬಾರಿ ವಿಶ್ವಚಾಂಪಿಯನ್ ಆಗಿದ್ದರು. ಇದೀಗ ಮೇರಿ ಕೋಮ್ ಈ ದಾಖಲೆಯನ್ನು ಮುರಿದರು.