ಉತ್ತರಖಂಡ್,ಜೂನ್,6,2024 (www.justkannada.in): ಉತ್ತರಾಖಂಡ್ ನ ಉತರ ಕಾಶಿ ಜಿಲ್ಲೆಯ ಸಹಸ್ರತಾಲ್ ಟ್ರೆಕ್ಕಿಂಗ್ ವೇಳೆ ಹವಾಮಾನ ವೈಫರೀತ್ಯದಿಂದ 9 ಚಾರಣಿಗರು ಸಾವನ್ನಪ್ಪಿದ್ದು ಇಂದೇ ಬೆಂಗಳೂರಿಗೆ ಮೃತದೇಹಗಳನ್ನ ಏರ್ ಲಿಫ್ಟ್ ಮಾಡುತ್ತೇವೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ.
ಕರ್ನಾಟಕದ ಚಾರಣಿಗರು ಸಹಸ್ರತಾಲ್ ನಲ್ಲಿ ಟ್ರೆಕ್ಕಿಂಗ್ ವೇಳೆ ಸಂಕಷ್ಟಕ್ಕೆ ಸಿಲುಕಿದ್ದರು. ಒಟ್ಟು 9 ಚಾರಣಿಗರು ಸಾವನ್ನಪ್ಪಿದ್ದಾರೆ ಎಂದು ಸಚಿವ ಕೃಷ್ಣಬೈರೇಗೌಡ ಮಾಹಿತಿ ನೀಡಿದ್ದಾರೆ. ಸಿಎಂ ಸೂಚನೆ ಮೇರೆಗೆ ಉತ್ತರಖಂಡ್ ಗೆ ಸಚಿವ ಕೃಷ್ಣಬೈರೇಗೌಡ ತೆರಳಿದ್ದರು.
ಈ ಕುರಿತು ಮಾತನಾಡಿರುವ ಅವರು, ರಕ್ಷಣೆ ಮಾಡಿರುವ 11 ಜನರನ್ನ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಗಿದೆ. 8 ಜನರನ್ನ ಡೆಹ್ರಾಡೂನ್ ಗೆ ಸ್ಥಳಾಂತರ, ಐವರನ್ನ ಉತ್ತರ ಕಾಶಿ ಸ್ಥಳಾಂತರ ಮಾಡಲಾಗಿದೆ . ನಿನ್ನೆ ಐವರು ಚಾರಣಿಗರ ಮೃತದೇಹ ಸ್ಥಳಾಂತರ ಮಾಡಲಾಗಿದೆ ಇಂದು ಬೆಳಿಗ್ಗೆ ನಾಲ್ಬರ ಮೃತದೇಹ ಸ್ಥಳಾಂತರಿಸಲಾಗಿದೆ. ಇಂದೇ 9 ಮೃತದೇಹಗಳನ್ನ ಬೆಂಗಳೂರಿಗೆ ಏರ್ ಲಿಫ್ಟ್ ಮಾಡಲಾಗುತ್ತದೆ ಎಂದು ತಿಳಿಸಿದರು.
Key words: 9 trekkers, die, Uttarakhand, Krishnabyre Gowda