ಕೇರಳ,ಫೆಬ್ರವರಿ,5,2021(www.justkannada.in): ಹೇಳಿ ಕೇಳಿ ಇದು ಕೊರೋನಾ ಕಾಲ. ಡೆಂಗ್ಯೂ, ಚಿಕನ್ ಗುನ್ಯ, ಜಿಕಾದಂತಹ ಅನೇಕ ರೋಗ, ಜ್ವರಗಳು ನಮ್ಮನ್ನೀಗಾಗಲೇ ಹಿಂಡಿಹಿಪ್ಪೆ ಮಾಡಿಬಿಟ್ಟಿವೆ. ನಮ್ಮ ಮನೆಗಳಲ್ಲಿ ಸೊಳ್ಳೆ ಕಾಟದಿಂದ ತಪ್ಪಿಸಿಕೊಳ್ಳಲು, ಅಂಗಡಿಗಳಲ್ಲಿ ಮಾರಾಟ ಮಾಡುವ ವಿವಿಧ ರೀತಿಯ ದುಬಾರಿ ಸೊಳ್ಳೆ ಬತ್ತಿಗಳನ್ನು ನಾವೆಲ್ಲರೂ ಒಮ್ಮೆಯಾದರೂ ಬಳಸಿಯೇ ಇರುತ್ತೇವೆ, ಹಾಗೂ ಒಮ್ಮೊಮ್ಮೆ ಏನು ಮಾಡಿದರೂ ಸೊಳ್ಳೆಗಳಿಂದ ಮುಕ್ತಿ ದೊರೆಯುವುದಿಲ್ಲ. ಆದರೆ ಇಲ್ಲೊಂದು 9 ವರ್ಷ ಪ್ರಾಯದ ಪುಟ್ಟ ಪೋರಿ ಸೊಳ್ಳೆಗಳಿಂದ ಮುಕ್ತಿ ಪಡೆಯುವ ಸುಲಭವಾದ ಮಾರ್ಗವನ್ನು ಕಂಡು ಹಿಡಿದಿದ್ದಾಳೆ.
ಈಕೆ ಹೆಸರು ಇಂದಿರಾ ಅರ್ಜುನ್. ಕೇವಲ 9 ವರ್ಷ ಪ್ರಾಯದ ಕೇರಳದ ಈ ಬಾಲಕಿ ಅತ್ಯಂತ-ಕಡಿಮೆ ದರದಲ್ಲಿ, ಪರಿಸರ-ಸ್ನೇಹಿ ಸೊಳ್ಳೆಗಳನ್ನು ಸೆರೆಹಿಡಿಯುವ ಬಲೆಯನ್ನು ಆವಿಷ್ಕರಿಸಿದ್ದಾಳೆ. ಬಳಸಿದ ಸ್ಕೂಟರ್ ಅಥವಾ ಕಾರಿನ ಟೈರ್ ಹಾಗೂ ಸುಲಭವಾಗಿ ದೊರೆಯುವ ಇನ್ನಿತರೆ ವಸ್ತುಗಳನ್ನು ಬಳಸಿ, ಡೆಂಗ್ಯು, ಚಿಕುನ್ ಗುನ್ಯ, ಜಿಕಾದಂತಹ ಅಪಾಯಕಾರಿ ರೋಗಗಳನ್ನು ಹರಡುವ ಸೊಳ್ಳೆಗಳನ್ನು ಸೆರೆ ಹಿಡಿಯುವ ಮಾರ್ಗವನ್ನು ಕಂಡು ಹಿಡಿದಿದ್ದಾಳೆ. ಇದನ್ನು ‘ಒವಿಲಾಂಟ ಸೊಳ್ಳೆ ಬಲೆ’ ಎಂದು ಹೆಸರಿಸಲಾಗಿದೆ.
ಬೇಕಾಗಿರುವ ಸಾಮಗ್ರಿಗಳು
ಒಂದು ಹಳೆಯ ಬಳಸಿದ ಟೈರ್, ಒಂದು ಬಟ್ಟೆ ನೇತು ಹಾಕುವ ಹ್ಯಾಂಗರ್, ಒಂದಿಚಿನ ಪಿವಿಸಿ ಪೈಪ್, ಸಿಲಿಕಾನ್ ಅಂಟು, ಒಂದು ಬಾಲ್ ವಾಲ್ವ್ (ನಲ್ಲಿ), ಪಿವಿಸಿ ಅಂಟು, ಫಿಲ್ಟರ್ ಕಾಗದ, ೨ ಲೀಟರ್ ನೀರು, ಕತ್ತರಿಸಲು ಒಂದು ಬ್ಲೇಡ್ ಅಥವಾ ಚಾಕು, ಬೂದುಗಾಜು.
ತಯಾರಿಸುವ ವಿಧಾನ:
- ಮೊದಲು ಟೈರ್ ಅನ್ನು ಅರ್ಧ ಕತ್ತರಿಸಿಕೊಳ್ಳಿ
- ಕತ್ತರಿಸಿದ ಒಂದು ಭಾಗದ ಟೈರ್ ನ ಅಡಿಯಲ್ಲಿ ಒಂದು ಇಂಚು ಸುತ್ತಳತೆಯ ರಂಧ್ರವನ್ನು ಮಾಡಿಕೊಳ್ಳಿ
- ಸಿಲಿಕಾನ್ ಅಂಟನ್ನು ಬಳಸಿ ರಂಧ್ರಕ್ಕೆ ಪಿವಿಸಿ ಪೈಪನ್ನು ಅಳವಡಿಸಿ, ಮತ್ತೊಂದು ತುದಿಗೆ ಪಿವಿಸಿ ಅಂಟನ್ನು ಬಳಸಿ ಬಾಲ್‌ವಾಲ್ವ್ (ನಲ್ಲಿ)ಯನ್ನು ಅಳವಡಿಸಿ.
- ಈಗ ಟೈರ್ ಅನ್ನು ಹ್ಯಾಂಗರ್‌ನಲ್ಲಿಡಿ.
- ಟೈರ್ ಒಳಗೆ 2 ಲೀಟರ್ ನೀರನ್ನು ಸುರಿಯಿರಿ
- ಈಗ ಟೈರ್ ನ ಎರಡು ತುದಿಗಳ ಮೇಲೆ ಫಿಲ್ಟರ್ ಕಾಗದವನ್ನು ಇಡಿ. ಈ ಫೀಲ್ಟರ್ ಕಾಗದ ಸೊಳ್ಳೆಗಳನ್ನು ಆಕರ್ಷಿಸುತ್ತದೆ
- ಈಗ ಈ ಸೊಳ್ಳೆ ಬಲೆಯನ್ನು ನಿಮ್ಮ ಮನೆಯ ಬಾಲ್ಕನಿಯಲ್ಲಿ ಮೂರು ದಿನಗಳವರೆಗೆ ನೇತು ಹಾಕಿ. ಇದರಿಂದ ಸೊಳ್ಳೆಗಳು ಆ ಫಿಲ್ಟರ್ ಕಾಗದದ ಮೇಲೆ ಕುಳಿತು ಮೊಟ್ಟೆಗಳನ್ನಿಡುತ್ತವೆ
- ಮೂರು ದಿನಗಳ ನಂತರ, ಟೈರ್‌ನಲ್ಲಿರುವ ನೀರಿನಿಂದ ಸೊಳ್ಳೆ ಮೊಟ್ಟೆಗಳನ್ನು ಶೋಧಿಸಿಕೊಳ್ಳಿ. ಇದಕ್ಕೆ ೨ ಲೀಟರ್ ಪಾತ್ರೆಯ ಮೇಲೆ ಅಗಲವಾದ ಫಿಲ್ಟರ್ ಬಟ್ಟೆಯೊಂದನ್ನು ಇಟ್ಟು ಅದನ್ನು ದಾರದಿಂದ ಬಿಗಿಯಬೇಕು. ನಂತರ ಟೈರ್‌ನ ಅಡಿಗೆ ಅಳವಡಿಸಿರುವ ಪಿವಿಸಿ ಪೈಪಿನ ನಲ್ಲಿಯನ್ನು ತಿರುಗಿಸಿ ಟೈರ್‌ನಲ್ಲಿರುವ ನೀರನ್ನು ಸಂಗ್ರಹಿಸಿ.
- ನೀರು ಶೋಧಿಸಿದ ನಂತರ, ಫಿಲ್ಟರ್ ಬಟ್ಟೆಯ ಮೇಲೆ, ಬೂದುಗಾಜನ್ನು ಬಳಸಿ ಸೊಳ್ಳೆಗಳು ಇಟ್ಟಿರುವ ಮೊಟ್ಟೆಗಳನ್ನು (ಲಾರ್ವೆ) ನೀವು ಕಾಣಬಹುದು
- ನಂತರ ಆ ಮೊಟ್ಟೆಗಳನ್ನು ನಾಶಪಡಿಸಲು ಫಿಲ್ಟರ್ ಬಟ್ಟೆಯನ್ನು ಕ್ಲೊರಿನ್ ದ್ರವದಲ್ಲಿ ಹುಷಾರಾಗಿ ಅದ್ದಿರಿ
- ಈ ದ್ರವದಲ್ಲಿ ಫೆರೊಮೊನ್‌ಗಳಿರುತ್ತವೆ. ನಂತರ ಪುನಃ ಆ ನೀರನ್ನು ಸೊಳ್ಳೆ ಬಲೆಯೊಳಗೆ ಸುರಿಯಿರಿ
- ಇದು ಇನ್ನೂ ಹೆಚ್ಚಿನ ಸೊಳ್ಳೆಗಳು ಅದರಲ್ಲಿ ಮೊಟ್ಟೆಗಳನ್ನಿಡಲು ಆಕರ್ಷಿಸುತ್ತದೆ. ಈ ಪ್ರಕ್ರಿಯೆಯನ್ನು ಪುನಃ ಮೂರು ದಿನಗಳಾದ ನಂತರ ಪುನರಾವರ್ತಿಸಿ
- ಈ ರೀತಿಯಾಗಿ ನೀವು ಅಪಾಯಕಾರಿ ರೋಗಗಳನ್ನು ಹರಡುವಂತಹ ಸೊಳ್ಳೆಗಳ ಸಂಖ್ಯೆಯನ್ನು ನಿಯಂತ್ರಿಸಬಹುದು. ಅದರಲ್ಲಿಯೂ ಈ ಕೊರೊನಾ ಕಾಲದಲ್ಲಿ ಇದು ಎಷ್ಟು ಉಪಯುಕ್ತ ಅಲ್ಲವೇ?!
ಪರಿಣಾಮ…
ಈ ಸೊಳ್ಳೆ ಬಲೆಯನ್ನು ಕೃಷಿ ಜಮೀನುಗಳಲ್ಲಿ ಹಾಗೂ ಇನ್ನಿತರೆ ಹೊರಾಂಗಣ ಪ್ರದೇಶಗಳಲ್ಲಿಯೂ ಬಳಸಬಹುದು. ಇದು ಇದೇ ವಿಧಾನದಿಂದ ತಯಾರಿಸುವ ಇತರೆ ಸೊಳ್ಳೆ ಬಲೆಗಳಿಗಿಂತ ಏಳು ಪಟ್ಟು ಹೆಚ್ಚು ಸೊಳ್ಳೆಗಳನ್ನು ಆಕರ್ಷಿಸುತ್ತದೆ ಹಾಗೂ ವಿವಿಧ ರೀತಿಯ ಅಪಾಯಕಾರಿ ರಾಸಾಯನಿಕಗಳ ಬಳಕೆಯನ್ನು ಕಡಿಮೆಗೊಳಿಸುತ್ತದೆ. ಜೊತೆಗೆ ಬಳಸಿರುವ ಟೈರ್‌ಗಳನ್ನು ಪುನಃ ಉಪಯೋಗಿಸಿದಂತೆಯೂ ಆಗುತ್ತದೆ.
ENGLISH SUMMARY….
9-year-old invents cost-effective, eco-friendly mosquito trap
A 9-year-old Malayali girl named Indira Arjun, has invented a low-cost and eco-friendly mosquito trap. It is made of a used tyre, to control mosquitoes that spread diseases like dengue, chikungunya and zika fever. It can be prepared easily at home. She has named at as ‘Ovillanta Mosquito Trap’
Things required:
Old used tyre, a hanger, 1″ PVC pipe, a silicon glue, a ball valve, PVC glue, filter paper, 2 litre water bottle, cutting blade, magnifying glass.
Method:
• First cut the old used tyre into half
• Make a 1 inch hole in the bottom of the tyre
• Take the 1 inch PVC pipe and attach it to the hole in the bottom of the tyre using silicon glue
• on the other end of the PVC pipe fix a ball valve using PVC glue.
• Hang the tyre using a hanger
• Pour 2 litre water into the tyre
• Place pieces of filter paper on both the sides of the tyre. They act as landing strips for mosquitoes
• Hang the mosquito trap in the balcony for three days, so that mosquitoes can lay eggs on the filter paper
• Filter the larvae of mosquito eggs from the solution (water) that is in the tyre. For this you have to you have to use filter cloth and a 2 litre jar. Place the filter cloth on top of the jar and tie it.
• Collect the solution by opening the ball valve (tap)
• You can see the larvae (mosquito eggs) collected on the filter cloth using a magnifying glass.
• Destroy the larvae using chlorine solution. For that you have dip the filter cloth in the chlorine solution safely.
• This solution contains pheromones. Again pour the solution into the Ovillander mosquito trap (tyre)
• This will attract more mosquitoes to lay its eggs inside the trap. This process is repeated after three days.
• This way you can control the population of mosquitoes that spread diseases, especially during this pandemic scenario.
Outcome:
This trap can be used in agricultural fields and other outer spaces. Apart from destroying seven times more number of mosquitoes this unique trap reduces usage of pesticides and helps in reusing of used tyres.
Key words: 9 year-old girl -invented – low-cost- environmentally -friendly -mosquito net.