ಬೆಂಗಳೂರು,ಸೆಪ್ಟಂಬರ್,20,2022(www.justkannada.in): ರಾಜ್ಯದಲ್ಲಿ 9,432 ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳು ಖಾಲಿ ಇದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದರು.
ವಿಧಾನಸಭೆ ಪ್ರಶ್ನೋತ್ತರ ಕಲಾಪದಲ್ಲಿ ಪೊಲೀಸ್ ಕಾನ್ಸ್ ಟೇಬಲ್ಗಳ ನೇಮಕಾತಿ ವಿಳಂಬ ಬಗ್ಗೆ ಹಾಸನ BJP ಶಾಸಕ ಪ್ರೀತಮ್ ಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವ ಅರಗ ಜ್ಞಾನೇಂದ್ರ, 9,432 ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳು ಖಾಲಿ ಇವೆ. ಈಗ 3,500 ಕಾನ್ಸ್ಟೇಬಲ್ ನೇಮಕಕ್ಕೆ ನೋಟಿಫಿಕೇಷನ್ ಆಗಿದೆ ಎಂದರು.
ವಯೋಮಿತಿ ಸಡಿಲಿಕೆ ಮಾಡಿ ಎಂಬ ಹೆಬ್ಬಾಳ್ಕರ್ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವ ಅರಗ ಜ್ಞಾನೇಂದ್ರ, ವಯೋಮಿತಿ 2 ವರ್ಷ ಸಡಿಲಿಕೆಗೆ ಮನವಿ ಇದೆ. ಯುವಕರನ್ನೇ ಹುದ್ದೆಗೆ ಆಯ್ಕೆ ಮಾಡಬೇಕು ಹೀಗಾಗಿ ವಯೋಮಿತಿ ಸಡಿಲಿಕೆ ಇಲ್ಲ ಎಂದು ತಿಳಿಸಿದರು.
Key words: 9,432 Police -ConsTable –Vacancies-Home Minister –Araga jnanendra.