ಬೆಂಗಳೂರು,ಸೆಪ್ಟಂಬರ್,3,2020(www.justkannada.in): ಡ್ರಗ್ಸ್ ದಂಧೆಗೆ ಸ್ಯಾಂಡಲ್ ವುಡ್ ನಂಟು ಆರೋಪ ಸಂಬಂಧ ಡ್ರಗ್ಸ್ ಬಗ್ಗೆ ತಿಳುವಳಿಕೆ ಮೂಡಿಸಲು ನನ್ನ ಹೋರಾಟ. ಸ್ಯಾಂಡಲ್ ವುಡ್ ಗೆ ಕೆಟ್ಟ ಹೆಸರು ಬರಬಾರದು ಎಂಬುದು ನನ್ನ ಉದ್ದೇಶ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ತಿಳಿಸಿದರು.
ಡ್ರಗ್ಸ್ ದಂಧೆಗೆ ಸ್ಯಾಂಡಲ್ ವುಡ್ ನಂಟು ಆರೋಪ ಕುರಿತು ಇಂದು ಸಿಸಿಬಿ ವಿಚಾರಣೆಗೆ ಹಾಜರಾಗುವ ಮುನ್ನ ಮಾಧ್ಯಮದ ಜತೆ ಮಾತನಾಡಿದ ಇಂದ್ರಜಿತ್ ಲಂಕೇಶ್, ಸಿಸಿಬಿಗೆ ಈಗಾಗಲೇ ಸಾಕಷ್ಟು ಮಾಹಿತಿ ನೀಡಿದ್ದೇನೆ. ನನ್ನ ಹೇಳಿಕೆಗೆ ನಾನು ಬದ್ಧ ಸಿಸಿಬಿ ವಿಚಾರಣೆಗೆ ಸಹಕಾರ ನೀಡುತ್ತೇನೆ. ಕನ್ನಡ ಚಿತ್ರರಂಗ ಶೇ.95ರಷ್ಟು ಸ್ವಚ್ಛವಾಗಿದೆ. ಉಳಿದ ಶೇ.5 ರಷ್ಟು ಮಂದಿ ಜಾಲದಲ್ಲಿ ಸಿಲುಕಿದ್ದಾರೆ. ಈಗ ಬಂದಿರುವ 3ನೇ ಪೀಳಿಗೆಯ ಕೆಲವರು ಸಿಲುಕಿದ್ದಾರೆ ಎಂದು ಹೇಳಿದರು.
ನನಗೆ ಗೊತ್ತಿರುವ ಮಾಹಿತಿ ನೀಡಿದ್ದೇನೆ. ನನ್ನ ಬ್ಯಾಗ್ ನಲ್ಲಿ ಹಾರ್ಡ್ ಡಿಸ್ಕ್, ಐಪ್ಯಾಡ್ ಇದೆ. ಅದರಲ್ಲಿ ಏನಿದೆ ಎಂದು ಹೇಳುವುದಿಲ್ಲ. ಸ್ಯಾಂಡಲ್ ವುಡ್ ಗೆ ಕೆಟ್ಟ ಹೆಸರು ಬರಬಾರದು ಎಂಬುದು ನನ್ನ ಉದ್ದೇಶ. ಕಿಂಗ್ ಪಿನ್ ಅನಿಕಾ ಈಗಾಗಲೇ 4 ಪುಟದ ಹೇಳಿಕೆ ನೀಡಿದ್ದಾರೆ. ಯಾರು ಭಾಗಿಯಾಗಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ. ನಾನೂ ಸಾಕಷ್ಟು ಮಾಹಿತಿ ನೀಡಿದ್ದೇನೆ. ಕನ್ನಡ ಚಿತ್ರರಂಗದವರೇ ಸಿಸಿಬಿಗೆ ಸಹಕಾರ ನೀಡಿದರೇ ಡ್ರಗ್ಸ್ ಜಾಲದ ಬಗ್ಗೆ ತನಿಖೆ ನಡೆಸಲು ಸಹಕಾರಿ ಎಂದು ಇಂದ್ರಜಿತ್ ಲಂಕೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.
Key words: 95% Kannada cinema – clean- Indrajith Lankesh – statement