ಮೈಸೂರು,ನವೆಂಬರ್,26,2022(www.justkannada.in): ಮೈಸೂರು ರಂಗಾಯಣದಲ್ಲಿ ಟಿಪ್ಪು ನಿಜ ಕನಸು ನಾಟಕ ಪ್ರದರ್ಶನ ವಿಚಾರಕ್ಕೆ ಸಂಬಂಧಿಸಿದಂತೆ ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ವಿರುದ್ಧ ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಹೆಚ್.ವಿಶ್ವನಾಥ್, ಅಡ್ಡಂಡ ಕಾರ್ಯಪ್ಪ ಅರ್ಜೆಂಟ್ ಆಗಿ MLC ಆಗಬೇಕು. ಅದಕ್ಕಾಗಿ ಸಾಂಸ್ಕೃತಿಕ ತಾಣವನ್ನ ಬೇರೆ ಬೇರೆ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಇದು ಬಹಳ ವಿಷಾದನೀಯ. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ರಂತಹ ಹೆಸರಿಟ್ಟುಕೊಂಡು ಅಡ್ಡಂಡ ಕಾರ್ಯಪ್ಪ ಅಪಮಾನ ಮಾಡುತ್ತಿದ್ದಾರೆ. ಇನ್ನೂ ಮುಂದೆ ಕಾರ್ಯಪ್ಪ ಅನ್ನುವ ಹೆಸರನ್ನ ತೆಗೆದು ಬಿಡಿ. ಅಡ್ಡಂಡನಿಂದ ಕೊಡಗಿಗೆ ಅವಮಾನವಾಗಿದೆ.ಆತನಿಗೆ MLC ಆಗಲು ಬಹಳ ಅರ್ಜೆಂಟ್ ಆಗಿದೆ ಅದಕ್ಕಾಗಿ RSS ವಿಚಾರಗಳನ್ನ ತೆಗೆದುಕೊಳ್ಳುತ್ತಿದ್ದಾರೆ. ಅಡ್ಡಂಡ ಕಾರ್ಯಪ್ಪನೊಂದಿಗೆ ಸಾಹಿತಿ ಭೈರಪ್ಪ ಸೇರಿರುವುದು ಸೂಕ್ತವಲ್ಲ. ಸಾಹಿತ್ಯ ಲೋಕದ ಎತ್ತರದ ವ್ಯಕ್ತಿ ಇವರ ಜೊತೆ ಸೇರಿರುವುದು ವಿಷಾದನೀಯ. ಭೈರಪ್ಪಗೆ ಅರ್ಜೆಂಟ್ ಆಗಿ ಜ್ಞಾನ ಪೀಠ ಬೇಕಿದೆ ಅನ್ನಿಸುತ್ತಿದೆ ಕೊಟ್ಟು ಬಿಡಿ. ಸಿಎಂ ಕೂಡಲೇ ಅಡ್ಡಂಡ ಕಾರ್ಯಪ್ಪರನ್ನ ತಕ್ಷಣ ತೆಗೆಯಬೇಕು ಎಂದು ಆಗ್ರಹಿಸಿದರು.
ಸಿದ್ದರಾಮಯ್ಯ ಯಾವುದೇ ಕ್ಷೇತ್ರದಲ್ಲಿ ನಿಂತರೂ ಗೆಲ್ಲಲಿದ್ದಾರೆ.
ಕೋಲಾರದಲ್ಲಿ ಸಿದ್ದರಾಮಯ್ಯ ಚುನಾವಣೆಯಲ್ಲಿ ಸ್ಪರ್ಧಿಸುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ವಿಶ್ವನಾಥ್, ಸಿದ್ದರಾಮಯ್ಯ ವಿರುದ್ಧ ಅ ಆ ಇ ಈ ಪ್ರಾರಂಭಿಸಿದ್ದಾರೆ. ಚಾಮುಂಡೇಶ್ವರಿಯಲ್ಲಿ ಸೋಲಿಸಿದ ಹಾಗೆ ತಂತ್ರ ಎಣೆಯುವ ಕಾರ್ಯಕ್ಕೆ ಈಗೀಗ ಪ್ರಾರಂಭವಾಗುತ್ತಿದೆ. ಆದರೆ ಸಿದ್ದರಾಮಯ್ಯ ಯಾವುದೇ ಕ್ಷೇತ್ರದಲ್ಲಿ ನಿಂತರೂ ಗೆಲ್ಲಲಿದ್ದಾರೆ. ಕೋಲಾರದಲ್ಲಿ ಸ್ಪರ್ಧೆಸಿದರೂ ಗೆಲ್ಲಲಿದ್ದಾರೆ ಎಂದು ಹೇಳುವ ಮೂಲಕ ಸಿದ್ಧರಾಮಯ್ಯ ಬಗ್ಗೆ ಸಾಫ್ಟ್ ಕಾರ್ನಾರ್ ವ್ಯಕ್ತಪಡಿಸಿದರು.
ಸಿಎಂ ಕೂಡಲೇ ಹಣಕಾಸು ಇಲಾಖೆಗೆ ಒಬ್ಬ ಸಚಿವರನ್ನ ನೇಮಿಸಬೇಕು
ಸಿಎಂ ಕೂಡಲೇ ಹಣಕಾಸು ಇಲಾಖೆಗೆ ಒಬ್ಬ ಸಚಿವರನ್ನ ನೇಮಿಸಬೇಕು. ಸಿಎಂ ಬಳಿ 8 ರಿಂದ 10 ಇಲಾಖೆಗಳಿವೆ. ಯಾವ ಯಾವ ಇಲಾಖೆಗಳು ಸಿಎಂ ಬಳಿ ಇರುತ್ತದೆಯೋ ಅದು ಸತ್ತು ಹೋಗುತ್ತದೆ. ಈ ಹಿಂದೆ ದೇವರಾಜ ಅರಸು, ವೀರಪ್ಪ ಮೊಯ್ಲಿ ಅಂತವರು ಹಣಕಾಸು ಖಾತೆಯನ್ನು ತಾವೇ ನಿಭಾಯಿಸದೆ ಇತರರಿಗೆ ನೀಡಿದ್ದರು. ಹಣಕಾಸು ಖಾತೆ ನಿಭಾಯಿಸಲು ಹೆಚ್ಚು ಸಮಯಬೇಕು. ಆದರೆ ಸಿಎಂಗೆ ಹೆಚ್ಚು ಸಮಯ ಕೊಡಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆ ಸಿಎಂ ತಮ್ಮ ಬಳಿ ಇರುವ ಹಣಕಾಸು ಖಾತೆಯನ್ನ ಬೇರೆಯವರಿಗೆ ನೀಡಬೇಕು ಎಂದು MLC ಹೆಚ್ ವಿಶ್ವನಾಥ್ ಸಲಹೆ ನೀಡಿದರು.
GST ವಿರುದ್ಧ ಕಿಡಿಕಾರಿದ MLC ಹೆಚ್ ವಿಶ್ವನಾಥ್..
ಇದೇ ವೇಳೆ GST ವಿರುದ್ಧ ಕಿಡಿಕಾರಿದ MLC ಹೆಚ್ ವಿಶ್ವನಾಥ್, ಉಪ್ಪಿನ ಮೇಲೆ ತೆರಿಗೆ ಹಾಕಿದ್ದಕ್ಕೆ ಅಂದು ಗಾಂಧೀಜಿ ಸತ್ಯಾಗ್ರಹ ಮಾಡಿದರು. ಇಂದು ಅದೇ ಉಪ್ಪಿನ ಮೇಲೆ ಟ್ಯಾಕ್ಸ್ ಹಾಕಿದ್ದಾರೆ. ರಾಜ್ಯದಲ್ಲಿ GSTಯಿಂದ 24ಸಾವಿರ ಕೋಟಿ ಸಂಗ್ರಹವಾಗುತ್ತಿದೆ. ಈ ಪೈಕಿ 12 ಸಾವಿರ ಕೋಟಿ ಹಣವನ್ನು ರಾಜ್ಯದಿಂದ ಕೇಂದ್ರಕ್ಕೆ ಕಳುಹಿಸುತ್ತಿದ್ದಿವೆ. ಹೆಚ್ಚು GST ಕಟ್ಟುವವರ ಪೈಕಿ ದೇಶದಲ್ಲಿ ನಾವೇ 2ನೆ ಸ್ಥಾನದಲ್ಲಿದ್ದೇವೆ. ಗುಜರಾತ್ ಮೊದಲನೇ ಸ್ಥಾನದಲ್ಲಿ ಇದೆ ಎಂದರು.
Key words: Soft corner – Siddaramaiah-MLC- H. Vishwanath against – Addanda Kariappa