ಮನೆ ಬಾಡಿಗೆ ನೀಡಲು ಪೊಲೀಸರ ಪರ್ಮೀಷನ್! MYSORE COMPOL ಆದೇಶದ ವಿರುದ್ಧ ಆಕ್ಷೇಪ

ಮೈಸೂರು, ನವೆಂಬರ್ 27, 2022 (www.justkannada.in): ಮೈಸೂರು ನಗರದಲ್ಲಿ ಮನೆ ಮಾಲೀಕರು ಬಾಡಿಗೆಗೆ ಮತ್ತು ಪೇಯಿಂಗ್ ಗೆಸ್ಟ್ (PG) ವಾಸ್ತವ್ಯಕ್ಕೆ ನೀಡುವಾಗ ಬಾಡಿಗೆದಾರ ವಾಸ್ತವ್ಯ ವಿವರವನ್ನು ನಿಗಧಿತ ಫಾರ್ಮ್ ಪೂರ್ಣ ಭರ್ತಿ ಮಾಡಿ ಸಂಬಂಧಿಸಿದ ಪೊಲೀಸ್ ಠಾಣೆಗೆ ಸ್ವತ: ಹಾಜರಾಗಿ ನೀಡಬೇಕು ಎಂದು ನಗರ ಪೊಲೀಸ್ ಆಯುಕ್ತರ ಆದೇಶಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

ಸರ್ಕಾರಿ ಅಧಿಕಾರಿಗಳು ಕೆಲಸ ಮಾಡುವಾಗ ಕೊಂಚ ಸಾಮಾನ್ಯ ಜ್ಞಾನ ಎಂಬುದನ್ನು ಉಪಯೋಗಿಸಬೇಕು. ಮೈಸೂರಿನಲ್ಸಿ ಬಾಡಿಗೆ ಮನೆ ಪಡೆಯಲು ಪೊಲೀಸ್ ಕ್ಲಿಯರೆನ್ಸ್ ಪಡೆಯಬೇಕು ಎಂಬ ಹೊಸ ನಿಯಮ ಪೂರ್ವಾಪರ ಆಲೋಚನೆ ಕೈಗೊಂಡ ನಿರ್ಧಾರವಾಗಿದೆ. ಆದರೆ ಪೊಲೀಸ್ ಅನುಮತಿ ಪಡೆದು ಬಾಡಿಗೆಗೆ ನೀಡಬೇಕು ಎಂಬ ವಿವೇಕ ಶೂನ್ಯ ಆದೇಶ ನೀಡಿರುವುದು ಮತ್ತಷ್ಟು ವಸೂಲಿಗೆ ದಾರಿಯಾಗಿದೆ ಎಂದು ಬಿಜೆಪಿ ವಕ್ತಾರ ಪ್ರಕಾಶ್ ಶೇಷರಾಘವಚಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

 

ಬಾಡಿಗೆಗೆ ನೀಡುವಾಗ ಬಾಡಿಗೆದಾರರ ಆಧಾರ್ ಕಾರ್ಡ್ ಪಡೆದು ಕೊಡಬೇಕು ಎಂಬ ನಿಯಮ ಮಾಡುವ ಬದಲು ಪೊಲೀಸ್ ಅನುಮತಿ ಪಡೆದು ಬಾಡಿಗೆಗೆ ನೀಡಬೇಕು ಎಂಬ ವಿವೇಕ ಶೂನ್ಯ ಆದೇಶ ನೀಡಿರುವುದು ಮತ್ತಷ್ಟು ವಸೂಲಿಗೆ ದಾರಿಯಾಗಿದೆ. ಸರ್ಕಾರಿ ನಿಯಮಗಳು ಸಾರ್ವಜನಿಕರ ಅನೂಕೂಲಕ್ಕೆ ಮಾಡಬೇಕು ಸುರಕ್ಷತೆಯ ನೆಪವೊಡ್ಡಿ ಕಿರುಕುಳ ನೀಡುವ ವ್ಯವಸ್ಥೆ ಜಾರಿಗೆ ತರಬಾರದು.  ಮೈಸೂರು ನಗರ ಪೊಲೀಸ್ ಆಯುಕ್ತರು ಕೂಡಲೇ ತಮ್ಮ ಆದೇಶ ಹಿಂದಕ್ಕೆ ಪಡೆದು ಸೂಕ್ತ ಮಾರ್ಪಾಡಿನ ಮೂಲಕ ಜನಸ್ನೇಹಿ ಮತ್ತು ಸುರಕ್ಷತೆಯನ್ನು ಗಮನದಲ್ಲಿರಿಸಿ ಹೊಸ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿದ್ದಾರೆ.