ನವದೆಹಲಿ ಆ,19,2019(www.justkannada.in): ಇತ್ತೀಚೆಗೆ ಕರ್ನಾಟಕದ ವಿವಿಧ ಭಾಗಗಳಲ್ಲಿ ನೆರೆಯಿಂದ ಜನಜೀವನ ತೊಂದರೆಗೊಳಗಾಗಿದ್ದು, ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ಜನರಿಗೆ ತುರ್ತಾಗಿ ಔಷಧಿಗಳ ಅವಶ್ಯಕತೆ ಇದ್ದು, ಔಷಧಿಗಳನ್ನು ಒದಗಿಸುವಂತೆ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿತ್ತು. ಈ ಮನವಿಗೆ ಸ್ಪಂದಿಸಿರುವ ಕೇಂದ್ರ ಸರ್ಕಾರ 40 ಮೆಟ್ರಿಕ್ ಟನ್ ಔಷಧಿಗಳನ್ನು ಪೂರೈಕೆ ಮಾಡಿದೆ.
ಈ ಔಷಧಿಗಳನ್ನು ಎಚ್.ಎಲ್.ಎಲ್ ಲೈಫ್ ಕೇರ್ ಲಿಮಿಟೆಡ್ ಇವರ ಸಹಯೋಗದಲ್ಲಿ ಏರ್ ಇಂಡಿಯಾ, ಇಂಡಿಗೋ, ವಿಸ್ತಾರಾ ಹಾಗೂ ಸ್ಪೈಸ್ ಜೆಟ್ ವಿಮಾನಯಾನ ಸಂಸ್ಥೆಗಳ ಮೂಲಕ ಉಚಿತವಾಗಿ ದೆಹಲಿಯಿಂದ ಬೆಂಗಳೂರಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಕರ್ನಾಟಕ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಹಾಗೂ ಕರ್ನಾಟಕ ಭವನದ ನಿವಾಸಿ ಆಯುಕ್ತರಾದ ನಿಲಯ್ ಮಿತಾಶ್ ಅವರು ತಿಳಿಸಿದರು.
ಪ್ಯಾರಸಿಟಮಾಲ್ 500 ಎಂ.ಜಿ, ಹಾಗೂ ಪ್ಯಾರಸಿಟಮಾಲ್ ಸಿರಫ್, ಟೆಟ್ರಾಸೈಕ್ಲಿನ್ 500 ಎಂ.ಜಿ, ಹೈಡ್ರೋಕಾರ್ಟಿಸೋನ್(100mg), ಟ್ಯಾಬ್ ಅಮೋಕ್ಸಿಸಿಲಿನ್ 125 ಡಿಟಿ, ಟ್ಯಾಬ್ ಮೆಟೊಕ್ಲೋಪ್ರಮೈಡ್ 10 ಎಂಜಿ, ಡೈಸಿಕ್ಲೋಮೈನ್ 20 ಎಂ.ಜಿ, ಕೋ-ಟ್ರಿಮೋಕ್ಸಜೋಲ್ ಡಿ.ಎಸ್, ರಾನಿಟಿಡಿನ್ 150 ಎಂಜಿ, ಟ್ಯಾಬ್ ಸಾಲ್ಬುಟಮಾಲ್ 2 ಎಂಜಿ, ನಿಯೋಮೈಸಿನ್ ಆಯಿಂಟ್ಮೆಂಟ್ ಒಳಗೊಂಡಂತೆ ವಿವಿಧ ತರಹದ ಔಷಧಿಗಳ ಪೂರೈಕೆಗೆ ರಾಜ್ಯ ಸರ್ಕಾರ ಮನವಿ ಮಾಡಿತ್ತು.
Key words: Free -Supply – medicines -Central Government – Neighborhoods – Karnataka