ಬೆಂಗಳೂರು, ಡಿಸೆಂಬರ್ 04, 2022 (www.justkannada.in): ಸರ್ಕಾರದ ಖಾಸಗೀ ಅನುದಾನಿತ ಪ್ರೌಢಶಾಲೆಗಳ ನೇರನೇಮಕಾತಿ, ಮುಂಬಡ್ತಿಗೆ ಸರಕಾರ ತಡೆ ನೀಡಿದೆ.
ಎಸ್ಸಿ, ಎಸ್ಟಿ ಸಮುದಾಯದವರಿಗೆ ನೇಮಕಾತಿಗಳಲ್ಲಿ ಮೀಸಲಾತಿ ಹೆಚ್ಚಳದಿಂದಾಗಿ ಈಗ ಸರ್ಕಾರದ ಖಾಸಗೀ ಅನುದಾನಿತ ಪ್ರೌಢಶಾಲೆಗಳ ನೇರನೇಮಕಾತಿ, ಮುಂಬಡ್ತಿಗೆ ತಡೆ ನೀಡಲಾಗಿದೆ.
ಸರ್ಕಾರ ಅನುಸೂಚಿತ ಜಾತಿ, ಪಂಗಡಗಳಿಗೆ ಸೇರಿದಂತ ವ್ಯಕ್ತಿಗಳಿಗೆ ನೇರನೇಮಕಾತಿ, ಪದೋನ್ನತಿಯಲ್ಲಿ ಮೀಸಲಾತಿಯನ್ನು ಜಾರಿಗೊಳಿಸಲು ರೋಸ್ಟರ್ ಬಿಂದುಗಳನ್ನು ಜಾರಿಗೊಳಿಸುವ ಪ್ರಕ್ರಿಯೆ ಚಾಲನೆಯಲ್ಲಿರುವುದರಿಂದ, ಎಲ್ಲಾ ನೇರ ನೇಮಕಾತಿ, ಮುಂಬಡ್ತಿ ಪ್ರಕ್ರಿಯೆಯನ್ನು ತಡೆಹಿಡಿಯಲು, ಇಲಾಖಾ ಮುಂಬಡ್ತಿ ಸಭೆಯನ್ನು ಆಯೋಜಿಸಬಾರದೆಂದು ಸೂಚಿಸಲಾಗಿದೆ.
ಖಾಸಗಿ ಅನುದಾನಿತ ಪ್ರೌಢಶಾಲೆಗಳ ನೇರನೇಮಕಾತಿ ಮತ್ತು ಮುಂಬಡ್ತಿ ಪ್ರಕ್ರಿಯೆ ಕೈಗೊಳ್ಳುವ ಬಗ್ಗೆ ಸರ್ಕಾರದ ಮಹತ್ವದ ಸೂಚನೆಗಳನ್ನು ಹೊರಡಿಸಿತ್ತು. ಹೀಗಾಗಿ ನೇರನೇಮಕಾತಿ, ಮುಂಬಡ್ತಿಗೆ ಸರಕಾರ ತಡೆ ನೀಡಲಾಗಿದೆ.