ಬೆಳಗಾವಿ,ಡಿಸೆಂಬರ್,6,2022(www.justkannada.in): ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಎಂಇಎಸ್ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಸಿಡಿದೆದ್ದಿದ್ದು, ಇಂದು ಕರವೇ ನಡಿಗೆ ಬೆಳಗಾವಿ ಕಡೆಗೆ ಕಾರ್ಯಕ್ರಮವನ್ನ ಹಮ್ಮಿಕೊಂಡಿದೆ.
ಗಡಿ ವಿವಾದ ಸಮಸ್ಯೆ ತಲೆದೂರಿದ್ದರೂ ಸಹ ಮಹಾರಾಷ್ಟ್ರ ಸಚಿವರು ಬೆಳಗಾವಿಗೆ ಭೇಟಿ ನೀಡುವುದಾಗಿ ಹೇಳಿದ್ದರು. ಆದರೆ ನಂತರ ಎಚ್ಚೆತ್ತು ಮಹಾರಾಷ್ಟ್ರ ಸರ್ಕಾರ ಸಚಿವರ ಬೆಳಗಾವಿ ಭೇಟಿಯನ್ನ ರದ್ದುಗೊಳಿಸಿದೆ ಎನ್ನಲಾಗಿದೆ.
ಈ ಕುರಿತು ಮಾತನಾಡಿರುವ ಕರವೇ ಅಧ್ಯಕ್ಷ ಟಿ.ಎ ನಾರಾಯಣಗೌಡ, ಗಡಿ ವಿವಾದ ಸುಪ್ರೀಂಕೋರ್ಟ್ ನಲ್ಲಿದೆ. ಮಹಾಜನ್ ವರದಿಯನ್ನ ಎಲ್ಲರೂ ಒಪ್ಪಿಕೊಳ್ಳಬೇಕು. ಗಡಿ ವಿಚಾರಕ್ಕೆ ಬಂದ್ರೆ ನಾವು ಸುಮ್ಮನಿರಲ್ಲ. ಬೆಳಗಾವಿಗೆ ಮಹಾರಾಷ್ಟ್ರ ಸಚಿವರ ಭೇಟಿಗೆ ಅವಕಾಶ ನೀಡಲ್ಲ. ಯಾವುಧೇ ಖಾರಣನ್ನೂ ನಾವು ಹಿಂದೆ ಸರಿಯಲ್ಲ ಎಂದಿದ್ದಾರೆ.
Key words: border -issue-Maharastra-karnataka-Mahajan’s- report – TA Narayana Gowda.