ಮೈಸೂರು,ಡಿಸೆಂಬರ್,7,2022(www.justkannada.in): ಪ್ರತಿ ಕುಟುಂಬದಲ್ಲಿ ತಾಯಿಯ ಪಾತ್ರ ಬಹಳ ಮುಖ್ಯ. ಹೀಗಾಗಿ ಮಕ್ಕಳು ಹಾಗೂ ತಾಯಂದಿರ ಪೋಷಣೆ ವಿಚಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕಿದೆ ಎಂದು ಮೈಸೂರು ವಿಶ್ವ ವಿದ್ಯಾನಿಲಯ ಕುಲಸಚಿವೆ ವಿ.ಆರ್.ಶೈಲಜಾ ತಿಳಿಸಿದರು.
ಮಾನಸ ಗಂಗೋತ್ರಿ ವಿಜ್ಞಾನ ಭವನದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವು ಹೈದರಾಬಾದ್ ನ ಯುನಿಸೆಫ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ಮಕ್ಕಳ ಆರೋಗ್ಯ ಮತ್ತು ಪೋಷಣೆ’ ಕುರಿತ ಎರಡು ದಿನಗಳ ಕಾರ್ಯಾಗಾರದಲ್ಲಿ ಮಾತನಾಡಿದ ಕುಲಸಚಿವೆ ವಿ.ಆರ್.ಶೈಲಜಾ, ಗರ್ಭಿಣಿ ಮಹಿಳೆ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಏಕೆಂದರೆ ತಾಯಿ ಆರೋಗ್ಯ ಮಕ್ಕಳ ಆರೋಗ್ಯ ಹಾಗೂ ಬೆಳವಣಿಗೆ ಮೇಲೂ ಪರಿಣಾಮ ಉಂಟು ಮಾಡುತ್ತದೆ. ಗರ್ಭಿಣಿ ಮಹಿಳೆಗೆ ರಕ್ತ ಹೀನತೆ ಇದ್ದರೆ, ಹುಟ್ಟುವ ಮಕ್ಕಳ ಆರೋಗ್ಯದ ಮೇಲೂ ಪರಿಣಾಮ ಉಂಟಾಗುತ್ತದೆ ಎಂದರು.
ತಾಯಿ ಮತ್ತು ಮಗುವಿನ ಆರೋಗ್ಯ ಕಾಪಾಡಿ ಸುಧಾರಿಸುವುದು ಯುನಿಸೆಫ್ ಪ್ರಮುಖ ಉದ್ದೇಶ. ಈ ನಿಟ್ಟಿನಲ್ಲಿ ಮಾಧ್ಯಮಗಳು ಪ್ರಸಾರ ಮಾಡುವ ಅಥವಾ ಪ್ರಕಟ ಮಾಡುವ ಸುದ್ದಿಗಳು ಮಕ್ಕಳ ಹಕ್ಕುಗಳನ್ನು ಎತ್ತಿ ಹಿಡಿಯುವಂತಾಗಬೇಕು. ಕೋವಿಡ್ ಸಮಯದಲ್ಲಿ ಇಡೀ ಜಗತ್ತೆ ಮೆಚ್ಚುವಂತೆ ಮಾಧ್ಯಮಗಳು ಕಾರ್ಯ ನಿರ್ವಹಿಸಿವೆ. ಪ್ರಾಣದ ಹಂಗು ತೊರೆದು ಜಾಗೃತಿ ಮೂಡಿಸುವ ಕೆಲಸ ಮಾಡಿವೆ. ಇದೀಗ ಮಕ್ಕಳು ಹಾಗೂ ತಾಯಂದಿರ ಪೋಷಣೆ ವಿಚಾರದಲ್ಲೂ ಈ ರೀತಿಯ ಕಾಳಜಿ ತೋರಬೇಕಿದೆ ಎಂದು ತಿಳಿಸಿದರು.
ಬೆಂಗಳೂರಿನ ಪೋಷಣೆ ಸಲಹೆಗಾರರಾದ ಡಾ.ಶ್ವೇತಾ ಆದರ್ಶ್, ಮೈಸೂರು ವಿವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಪ್ರೊ.ಎಂ.ಎಸ್.ಸಪ್ನಾ, ಮುಖ್ಯಸ್ಥರಾದ ಪ್ರೊ.ಸಿ.ಕೆ.ಪುಟ್ಟಸ್ವಾಮಿ, ಪ್ರೊ.ಮಮತಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Key words: More care – children – mothers- Mysore University – Registrar- VR Shailaja
ENGLISH SUMMARY…
More concern towards children and mothers care required: UoM Registrar V.R. Shylaja
Mysuru, December 7, 2022 (www.justkannada.in): “The role of a mother in every family is vital. Hence, more concern and care towards children and mothers is required,” observed University of Mysore Registrar V.R. Shylaja.
She participated in a two-day workshop on the topic, “Care and Health of Children,” organized by the Department of Journalism and Mass Communications, University of Mysore, in association with the UNICEF, Hyderabad. In her address, she said, “a pregnant woman should take more care of her health, because it impacts on the health and growth of both the mother and the child. In case if a woman is anemic, it might impact the still to be born child,” she said.
“It is the objective of the UNICEF to ensure improvement of both the mother and the child. Any news or story published by the media should uplift the rights of children. The media’s response during COVID was appreciable across the world. They created awareness among the people without fear of their own lives. Likewise, the media should also shoulder responsibility and work towards creating awareness about the care of children and mothers too,” she added.
Dr. Shweta, Nutrition Advisor, Bengaluru, Prof. M.S. Sapna, of the Department of Journalism and Mass Communication, University of Mysore, Prof. C.K. Puttaswamy, HoD, Prof. Mamatha and others were present.
Keywords: Workshop/ University of Mysore/ Dept. of Journalism/ UNICEF/ Children/ Mothers