ಬೆಂಗಳೂರು, ಡಿಸೆಂಬರ್ 17, 2022(www.justkannada.in): ನೆವಾರ್ಕ್ ನ ಕೆಥೆಡ್ರೆಲ್ ಬಸಿಲಿಕಾ ಹಾಗೂ ಬೇಲೂರಿನ ರಾಮನ ವಿಗ್ರಹದವರೆಗೆ ಡಿಸೆಂಬರ್ 16 ರಿಂದ ಜನವರಿ 1ರವರೆಗೆ ನಡೆಯುತ್ತಿರುವ ಬೆಂಗಳೂರಿನ 48ನೇ ವಾರ್ಷಿಕ ಕೇಕ್ ಶೋದಲ್ಲಿ ಒಟ್ಟು ೨೮ ವಿವಿಧ ಮಾದರಿಗಳ ಕೇಕ್ ಗಳು ಪ್ರದರ್ಶನಗೊಳ್ಳಲಿವೆ.
ಪ್ರದರ್ಶನದಲ್ಲಿ ಪ್ರದರ್ಶಿಸಲ್ಪಡುವ ತಿನ್ನಲು ಯೋಗ್ಯವಾಗಿರುವಂತಹ ಈ ಕೇಕುಗಳನ್ನು ಇನ್ಸ್ಟಿಟ್ಯೂಟ್ ಆಫ್ ಬೇಕಿಂಗ್ ಅಂಡ್ ಕೇಕ್ ಆರ್ಟ್ ನ 20 ತಯಾರಕರ ತಂಡದವರು ವಿನ್ಯಾಸಗೊಳಿಸಿದ್ದು, ಇದರ ಹಿಂದೆ ಈ ತಂಡದವರ ಮೂರು ತಿಂಗಳ ಪರಿಶ್ರಮವಿದೆ. ಈ ಕೇಕ್ ಶೋನ ಪರಿಕಲ್ಪನೆ ಸುಮಾರು ಆರು ತಿಂಗಳ ಹಿಂದೆಯೇ ರೂಪಗೊಂಡಿತ್ತು.
ನ್ಯೂಜರ್ಸಿಯ ನೆವಾರ್ಕ್ ನಲ್ಲಿರುವ ಸೇಕ್ರೆಡ್ ಹಾರ್ಟ್ ಕೆಥೆಡ್ರಲ್ ಬಸಿಲಿಕಾ ಚರ್ಚ್ ಉತ್ತರ ಅಮೇರಿಕಾ ಭಾಗದಲ್ಲಿರುವ ೫ನೇ ಅತೀ ದೊಡ್ಡ ಚರ್ಚ್ ಆಗಿದೆ. ಈ ಬಾರಿ ಈ ಚರ್ಚ್ ಮಾದರಿಯ ಕೇಕ್ ಅನ್ನು ವಿನ್ಯಾಪಡಿಸಲು ಆಯ್ಕೆ ಮಾಡಲಾಗಿದ್ದು, ಅತ್ಯಂತ ಸೂಕ್ಷ್ಮವಾದ ವಿನ್ಯಾಸಗಳಿಂದ ಕೂಡಿದೆ.
ಭಾರತದ ಪ್ರಾಚೀನ ಕಲೆಯನ್ನು ಬಿಂಬಿಸುವಂತಹ ಇತರೆ ಗಮನಾರ್ಹ ವಿನ್ಯಾಸಗಳ ಕೇಕುಗಳೆಂದರೆ ಅಶೋಕಾ ಸ್ತಂಭ, ಹಾಗೂ ವಿದ್ಯುತ್ ಕಾರ್ ಗಳನ್ನು ಬಿಂಬಿಸುವ ಕೇಕ್ ಗಳಾಗಿವೆ. ಉಕ್ರೇನ್ ಜನರಿಗೆ ಬೆಂಬಲವನ್ನು ಸೂಚಿಸುವ ಸಲುವಾಗಿ ಈ ಬಾರಿ ಕೇಕ್ ತಯಾರಕರು ಉಕ್ರೇನ್ ನ ರಾಷ್ಟ್ರೀಯ ಸ್ವಾತಂತ್ರ್ಯ ಸ್ಮಾರಕ ಸ್ಟ್ಯಾಚ್ಯೂ ಆಫ್ ಬೆರೆಹೈನಿಯಾದ ಮಾದರಿಯನ್ನು ತಯಾರಿಸಲಾಗಿದೆ.
ಕ್ರಿಯಾಶೀಲತೆಯ ಮೂಲಕ ಯಾವುದೇ ಓರ್ವ ಸಾಧಾರಣ ವ್ಯಕ್ತಿಯಾದರೂ ಸಹ ತನ್ನ ಬಲವನ್ನು ಯಾವ ರೀತಿ ಜಗತ್ತಿನ ಮುಂದೆ ಪ್ರದರ್ಶಿಸಬಹುದು ಎಂದು ಪ್ರತಿಬಿಂಬಿಸಲು ೨೦೨೧ರ ಡಿಸ್ನಿ ಚಲನಚಿತ್ರ ‘ಎನ್‌ಕ್ಯಾಂಟೊ’ ಮಾದರಿಯ ಕೇಕ್ ಇದೆ. ಈ ಸಂಬಂಧ ಮಾತನಾಡಿದ ಇನ್ಸ್ಟಿಟ್ಯೂಟ್ ಆಫ್ ಬೇಕಿಂಗ್ ಅಂಡ್ ಕೇಕ್ ಆರ್ಟ್ ನ ನಿರ್ದೇಶಕ ಮನೀಶ್ ಗೌರವ ಅವರು, “ನಾವು ಕೇಕುಗಳನ್ನು ಒಪ್ಪಿಕೊಳ್ಳುವಂತಹ ವಿನ್ಯಾಸಗಳ ಕಡೆ ಹೆಚ್ಚು ಗಮನಕೇಂದ್ರೀಕರಿಸುತ್ತಿದ್ದೇವೆ. ಈ ವಿನ್ಯಾಸದ ಕೇಕುಗಳನ್ನು ತಯಾರಿಸುವುದು ಬಹಳ ದೊಡ್ಡ ಕೆಲಸ. ಆದರೆ ಇತರೆ ವಿಷಯಗಳೊಂದಿಗೆ ಹೋಲಿಸಲು ಅದನ್ನು ಸಣ್ಣ ರೂಪದಲ್ಲಿ ತಯಾರಿಸಬಹುದು. ಭೇಟಿ ನೀಡುವ ಎಲ್ಲರಿಗೂ ಖರೀದಿಸುವ ಅವಕಾಶ ನೀಡುವುದು ನಮ್ಮ ಉದ್ದೇಶವಾಗಿದೆ,” ಎಂದು ವಿವರಿಸಿದರು.
ಈ ಕೇಕುಗಳನ್ನು ತಯಾರಿಸಲು ೨೦ ಟನ್ ಗಳಷ್ಟು ಪದಾರ್ಥಗಳನ್ನು ಬಳಸಲಾಗಿದೆ. ಬೆಂಗಳೂರಿನ ಸೆಂಟ್ ಜೋಸೆಫ್ ಶಾಲಾ ಮೈದಾನದಲ್ಲಿ ನಡೆಯಲಿರುವ ಕೇಕ್ ಶೋಗೆ ಈ ಬಾರಿ ೪೦,೦೦೦ಕ್ಕೂ ಹೆಚ್ಚಿನ ಸಂಖ್ಯೆಯ ಜನ ಭೇಟಿ ನಿರೀಕ್ಷೆ ಇದೆ. ಕೇಕ್ ಶೋನ ಈ ಬಾರಿ ಪ್ರವೇಶ ಶುಲ್ಕ ಪ್ರತಿ ವ್ಯಕ್ತಿಗೆ ರೂ.೧೦೦ ನಿಗಧಿಪಡಿಸಲಾಗಿದೆ.
ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್
Key words: electric cars – churches-28 different- flavors of cakes- Bangalore -Cake Show