ಮೈಸೂರು,ಡಿಸೆಂಬರ್,26,2022(www.justkannada.in): ಮೈಸೂರಿನಲ್ಲಿ ಲಾ ಗೈಡ್ ಕನ್ನಡ ಕ್ಯಾಲೆಂಡರ್ ಡೈರಿ ಬಿಡುಗಡೆ ಮಾಡಲಾಯಿತು. ಇದೇ ವೇಳೆ ಗಣ್ಯರಿಗೆ ಗೌರವ ಸಲ್ಲಿಕೆ ಮಾಡಲಾಯಿತು.
ಲಾಗೈಡ್ ಹೆಚ್ ಎನ್ ವೆಂಕಟೇಶ್ ನೇತೃತ್ವದಲ್ಲಿ ಮೈಸೂರಿನ ಏರ್ ಲೈನ್ಸ್ ಹೋಟೆಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ಸದಸ್ಯರಾದ ಸಿ ಜಿ ಹುನಗುಂದ ಹಾಗೂ ಮೈಸೂರು ನಗರ ಪೋಲಿಸ್ ಆಯುಕ್ತ ರಮೇಶ್ ಭಾನೋತ್ ಅವರು ಲಾ ಗೈಡ್ ಕನ್ನಡ ಕ್ಯಾಲೆಂಡರ್ ಡೈರಿ ಬಿಡುಗಡೆ ಮಾಡಿದರು. ದೇಶದ ಎತ್ತರದ ಪ್ರತಿಮೆಗಳ ಭಾವಚಿತ್ರಗಳನ್ನೊಳಗೊಂಡ ಕ್ಯಾಲೆಂಡರ್ ಇದಾಗಿದೆ.
ಇದೇ ವೇಳೆ ಮೈಸೂರು ವಕೀಲರ ಸಂಘದ ಅಧ್ಯಕ್ಷ ಎಂ ಮಹದೇವಸ್ವಾಮಿ, ಕಾರ್ಯದರ್ಶಿ ಎಸ್ ಉಮೇಶ್, ಹಿರಿಯ ವಕೀಲ ಎಂ. ಡಿ ಹರೀಶ್ ಕುಮಾರ್ ಹೆಗ್ಡೆ ಪತ್ರಕರ್ತರಾದ ಕೂಡ್ಲಿ ಗುರುರಾಜ್, ಕೊಳ್ಳೇಗಾಲ ಮಹೇಶ್ , ನಿವೃತ್ತ ಸರ್ಕಾರಿ ಅಭಿಯೋಜಕ ಆನಂದ್ ಕುಮಾರ್ ಗೆ ಗೌರವ ಸಲ್ಲಿಕೆ ಮಾಡಲಾಯಿತು.
Key words: Law -Guide –Kannada- Calendar Diary –release- Mysore.