ಮಂಡ್ಯ,ಡಿಸೆಂಬರ್,26,2022(www.justkannada.in): ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಪದೇ ಪದೇ ಕ್ಯಾತೆ ತೆಗೆಯುತ್ತಲೇ ಇದ್ದು ಸುಪ್ರೀಂಕೋರ್ಟ್ ವಿಚಾರಣೆ ಮುಗಿಯುವವರೆಗೆ ಗಡಿ ಭಾಗವನ್ನ ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸಿ ಎಂದು ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್ ಠಾಕ್ರೆ ಹೇಳಿಕೆ ನೀಡಿದ್ದಾರೆ.
ಹೀಗೆ ಪದೇ ಪದೇ ಗಡಿ ವಿಚಾರದಲ್ಲಿ ರಾಜ್ಯದ ವಿರುದ್ದ ಮಹಾರಾಷ್ಟ್ರ ರಾಜಕೀಯ ನಾಯಕರು ಉದ್ಧಟತನದ ಹೇಳಿಕೆ ಮುಂದುವರೆಸಿರುವ ಹಿನ್ನೆಲೆ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಧಮ್ ತಾಕತ್ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಭಾಷಣ ಮಾಡ್ತಾರೆ. ಬೆಳಗಾವಿ ವಿಚಾರದಲ್ಲಿ ನಿಮ್ಮ ಧಮ್ ತಾಕತ್ತು ತೋರಿಸಿ. ಪ್ರಧಾನಿ ಮೋದಿ ಎದುರು ನಿಮ್ಮ ತಾಕತ್ತು ತೊರಿಸಿ . ಬೆಳಗಾವಿ ಕರ್ನಾಟಕದ ಸ್ವತ್ತು. ಬೆಳಗಾವಿ ಬಗ್ಗೆ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಡಬಲ್ ಇಂಜಿನ್ ಸರ್ಕಾರ ಇದೆ. ನಮ್ಮ 25 ಸಂಸದರನ್ನ ಕೇಂದ್ರ ಎಲ್ಲಿಟ್ಟಿದ್ದಾರೆ ಅಂತಾ ಗೊತ್ತು ಎಂದು ಹೆಚ್.ಡಿ ಕುಮಾರಸ್ವಾಮಿ ಲೇವಡಿ ಮಾಡಿದರು.
Key words: Show -your -courage – strength – Belgaum issue- CM Bommai- HD Kumaraswamy