ಜ.11ರಿಂದ ಕಾಂಗ್ರೆಸ್ ಬಸ್ ಯಾತ್ರೆ: ಎರಡು ಪ್ರತ್ಯೇಕ ಸಮಿತಿ ರಚಿಸಿದ ಕೆಪಿಸಿಸಿ ಅಧ್ಯಕ್ಷ  ಡಿ.ಕೆ ಶಿವಕುಮಾರ್

ಬೆಂಗಳೂರು,ಜನವರಿ ,3,2023(www.justkannada.in): ನಾಲ್ಕೈದು ತಿಂಗಳಲ್ಲಿ  ರಾಜ್ಯ ವಿಧಾನಸಭೆ ಚುನಾವಣೆ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಭರ್ಜರಿ ಸಿದ್ಧತೆ ನಡೆಸಿದ್ದು, ಪಕ್ಷ ಸಂಘಟನೆಗಾಗಿ ಜನವರಿ 11ರಿಂದ  ಬಸ್ ಯಾತ್ರೆ ಹಮ್ಮಿಕೊಂಡಿದೆ.  ಈ ಬಸ್ ಯಾತ್ರೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಎರಡು ಪ್ರತ್ಯೇಕ ಸಮನ್ವಯ ಸಮಿತಿ ರಚಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

 ಜನವರಿ 11ರಿಂದ ಕಾಂಗ್ರೆಸ್ ನಾಯಕರ ಜಂಟಿ ಬಸ್ ಯಾತ್ರೆ ಆರಂಭವಾಗಲಿದೆ. ಬೆಳಗಾವಿಯಿಂದ ಶುರುವಾಗಲಿದ್ದು, ಒಟ್ಟೂ 21 ಜಿಲ್ಲೆಗಳಲ್ಲಿ ಬಸ್ ಯಾತ್ರೆ ಸಂಚರಿಸಲಿದೆ. ಈ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್ ಅವರು ಉತ್ತರ ಹಾಗೂ ದಕ್ಷಿಣ ಕರ್ನಾಟಕ್ಕೆ ಎರಡು ಪ್ರತ್ಯೇಕ ಸಮನ್ವಯ ಸಮಿತಿ ರಚನೆ ಮಾಡಿದ್ದಾರೆ.

ಉತ್ತರ ಕರ್ನಾಟಕ ಭಾಗಕ್ಕೆ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ನೇತೃತ್ವದಲ್ಲಿ 22 ಸಮನ್ವಯ ಸದಸ್ಯರನ್ನು ನೇಮಿಸಿದರೇ, ದಕ್ಷಿಣ ‌ಕರ್ನಾಟಕಕ್ಕೆ ಸಂಸದ ಜಿ ಸಿ ಚಂದ್ರಶೇಖರ ನೇತೃತ್ವದಲ್ಲಿ 29 ಸದಸ್ಯರ ನೇಮಕ ಮಾಡಿ ಡಿಕೆ ಶಿವಕುಮಾರ್ ಆದೇಶ ಹೊರಡಿಸಿದ್ದಾರೆ. ಈ ಎರಡು ಸಮನ್ವಯ ಸಮಿತಿ ಬಸ್ ಯಾತ್ರೆಯ ಸಿದ್ಧತೆ ನೋಡಿಕೊಳ್ಳಲಿದೆ.

Key words: Congress -Bus Yatra – January 11- DK Shivakumar – two- separate -committees